ಗಾಯಗೊಂಡ ಸರ್ಪ ರಕ್ಷಣೆ: ಮರಳಿ ಕಾಡಿಗೆ


ಕುಮಟಾ: ರಾಷ್ಟ್ರೀಯ ಹೆದ್ದಾರಿಯಂಚಿನ ಬ್ಯಾರಿಕೇಡೊಂದರಲ್ಲಿ ನುಸುಳಿಕೊಂಡ ಗಾಯಗೊಂಡ ಸರ್ಪವೊಂದನ್ನು ಉರಗಪ್ರೇಮಿ ಪವನ ನಾಯ್ಕ ಕಲಭಾಗ ಮಂಗಳವಾರ ರಾತ್ರಿ ಸುರಕ್ಷಿತವಾಗಿ ಹಿಡಿದು, ಸೂಕ್ತ ಚಿಕಿತ್ಸೆ ನೀಡಿ, ಮರಳಿ ಕಾಡಿಗೆ ಬಿಟ್ಟಿದ್ದಾರೆ.

ತಾಲೂಕಿನ ಹೊಳೆಗದ್ದೆ ಟೋಲ್‍ಗೇಟ್ ಬಳಿಯ ಹೆದ್ದಾರಿಯಲ್ಲಿ ಸಂಚರಿಸುವಾಗ ಅಪರಿಚಿತ ವಾಹನ ಬಡಿದು ನಾಗರಹಾವು ತೀವ್ರ ಗಾಯಗೊಂಡಿದ್ದು, ಬಳಿಕ ಅಲ್ಲೇ ಪಕ್ಕದಲ್ಲಿದ್ದ ಐಆರ್‍ಬಿ ಕಂಪನಿಯ ಬ್ಯಾರಿಕೇಡ್‍ನಲ್ಲಿ ನುಸುಳಿಕೊಂಡಿತ್ತು. ವಿಷಯ ತಿಳಿದ ನಂತರ ಸ್ಥಳೀಯರು ಉರಗ ಪ್ರೇಮಿ ಪವನ ನಾಯ್ಕ ಅವರನ್ನು ಸ್ಥಳಕ್ಕೆ ಕರೆಸಿ, ಸರ್ಪಕ್ಕೆ ಸೂಕ್ತ ಚಿಕಿತ್ಸೆ ಒದಗಿಸಿ, ಸ್ಥಳೀಯರ ಸಹಕಾರದಿಂದ ಅಲ್ಲೇ ಪಕ್ಕದಲ್ಲಿದ್ದ ಕಾಡಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಪವನ ನಾಯ್ಕರ ಈ ಕಾರ್ಯಕ್ಕೆ ನೂರಾರು ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.