‘ಹೆಬ್ಬಾರ್’ ಜಯ ಹಿನ್ನೆಲೆ; ಕ್ರೇನ್ ಮೇಲೆ ಬಂತು ಸೇಬುಹಣ್ಣಿನ ವಿಜಯಮಾಲೆ!

ಶಿರಸಿ: ಯಲ್ಲಾಪುರ ವಿಧಾನಸಾಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಎದುರು ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ 31406 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹೆಬ್ಬಾರ ಗೆಲುವಿನ ನಗೆ ಬೀರುತಿದ್ದಂತೆ ನಗರದಲ್ಲಿ ಹೆಬ್ಬಾರ್ ಬೆಂಬಲಿಗರು ಸೇಬು ಹಣ್ಣಿನ ವಿಜಯಮಾಲೆಯನ್ನು ಸಿದ್ಧಪಡಿಸಿದ್ದಾರೆ. ಕ್ರೇನ್ ಮೇಲೆ ತಂದಿರುವ ಈ ವಿಜಯಮಾಲೆ ನೋಡುಗರ ಗಮನ ಸೆಳೆಯುತ್ತಿದೆ. 2 ಕ್ವಿಂಟಾಲ್ ಭಾರದ ಈ ಮಾಲೆಗೆ 1500ಕ್ಕೂ ಅಧಿಕ ಸೇಬು ಹಣ್ಣನ್ನು ಬಳಸಿದ್ದರು.

 

Categories: ಚಿತ್ರ ಸುದ್ದಿ

Leave A Reply

Your email address will not be published.