ಹೀರೆಗುತ್ತಿ ಶಾಲಾ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಣೆ


ಕುಮಟಾ: ಹಿರೇಗುತ್ತಿಯ ಸ್ಪಂದನಾ ಫೌಂಡೇಶನ್ ಸಮಾಜದಲ್ಲಿ ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ಪ್ರಾಂಶುಪಾಲ ಬಿ. ಸೀತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.

ತಾಲೂಕಿನ ಹಿರೇಗುತ್ತಿ ಸೆಕೆಂಡರಿ ಪ್ರೌಢಶಾಲೆಯಲ್ಲಿ ಸ್ಪಂದನಾ ಫೌಂಡೇಶನ್ ವತಿಯಿಂದ ಆಯೋಜಿಸಿದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಸ್ಪಂದನಾ ಫೌಂಡೇಶನ್ನಿನ ಸಾಮಾಜಿಕ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದರು. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಎಂ.ಎಂ ರಾವ್ ಮಾತನಾಡಿ, ಸೇವೆಯ ಪ್ರತಿಫಲ ಸೇವೆ ಎಂಬಂತೆ ಸ್ಪಂದನಾ ಫೌಂಡೇಶನ್ ಮುಂದಿನ ದಿನಗಳಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಸೇವಾ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಲಿ ಎಂದರು.

ಪ್ರಾಸ್ತಾವಿಕವಾಗಿ ಎನ್.ರಾಮು ಹಿರೇಗುತ್ತಿ ಮಾತನಾಡಿ, ಶೈಕ್ಷಣಿಕ ಅಗತ್ಯಗಳಿಗೆ ದಾನಿಗಳು ನೆರವಾಗಬೇಕೆಂಬ ಉದ್ದೇಶದಿಂದ ಕಳೆದ 8 ವರ್ಷಗಳಿಂದ ಸತತವಾಗಿ ಹಿರೇಗುತ್ತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಗುರುತಿನ ಪತ್ರ ನೀಡಲು ಸಹಕರಿಸಿದ ಸ್ಪಂದನಾ ಫೌಂಡೇಶನ್ ಸದಸ್ಯರಾದ ಗಣಪತಿ ಪಟಗಾರ ಹಿತ್ತಲಮಕ್ಕಿ, ಗುರುರಾಜ ನಾಯಕ ಹಿರೇಗುತ್ತಿ ಆದರ್ಶ ನಾಯಕ, ಚಂದ್ರಶೇಕರ ಪಟಗಾರ ಸಹಾಯವನ್ನು ಸ್ಮರಿಸಿದರು.

ಮಣಿಪಾಲಿನ ಭಾರತೀಯ ವಿಕಾಸ ಟ್ರಸ್ಟಿನ ಅರುಣ ಮಾತನಾಡಿದರು. ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ ಅಧ್ಯಕ್ಷತೆವಹಿಸಿ, ಮಾತನಾಡಿದರು. ಹೊನ್ನಾವರದ ಸಂಗಮ ಸೇವಾ ಸಂಸ್ಥೆಯ ಸಂಘಟಕ ರವೀಂದ್ರ ಶೆಟ್ಟಿ, ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೇಕರ, ನಾಗರಾಜ ನಾಯಕ, ಜಾನಕಿ ಗೊಂಡ, ಮಹಾದೇವ ಗೌಡ, ಇಂದಿರಾ ನಾಯಕ, ಶಿಲ್ಪಾ ನಾಯಕ, ಕವಿತಾ ಅಂಬಿಗ, ಗೋಪಾಲಕೃಷ್ಣ ಗುನಗಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ವೇತಾ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ಶಿವರಾಜ ನಾಯಕ ಸ್ವಾಗತಿಸಿದರು. ಸಹನಾ ಗಾಂವಕರ ನಿರೂಪಿಸಿದರು. ಶ್ರೀದೇವಿ ಹಳ್ಳೇರ ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.