ಆನಂದಾಶ್ರಮ ಪ್ರೌಢಶಾಲೆಗೆ ಉ.ಪ್ರದೇಶ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿ ಭೇಟಿ


ಗೋಕರ್ಣ: ಬಂಕಿಕೊಡ್ಲದ ಆನಂದಾಶ್ರಮ ಪೌಢಶಾಲೆಗೆ ಉತ್ತರ ಪ್ರದೇಶ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿ ಮೂಲ ಗೋಕರ್ಣದವರಾದ ನಿತಿನ್ ರಮೇಶ ಗೋಕರ್ಣ ಭೇಟಿ ನೀಡಿದರು.

ಇಲ್ಲಿನ ಶಾಲಾ ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಮಾತುಕತೆ ನಡೆಸಿ, ಶಾಲೆ ಸುದೀರ್ಘ ಇತಿಹಾಸ, ಇಲ್ಲಿನ ವಿದ್ಯಾರ್ಥಿಗಳು ಮಾಡಿದ ಸಾಧನೆ ಪರಿಚಯ ಮಾಡಿಕೊಂಡರು. ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಸಂಸ್ಥೆಯನ್ನು ಪ್ರಶಂಸಿದರು. ಮೊದಲು ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆಡಳಿತ ಮಂಡಳಿಯಿಂದ ಭವ್ಯ ಸ್ವಾಗತ ನೀಡಲಾಯಿತು. ಮುಖ್ಯಾಧ್ಯಾಪಕ ಗಂಗಾಧರ ಭಟ್, ಸಂಸ್ಥೆಯ ಗೌರವ ಕಾರ್ಯದರ್ಶಿ ವಿವೇಕ ನಾಡಕರ್ಣಿ ಮತ್ತು ಶಿಕ್ಷಕ ವೃಂದವರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.