ಅಂಬೇಡ್ಕರವರ ಪುಣ್ಯತಿಥಿ ಅಂಗವಾಗಿ ಮುಂಡಗೋಡಿನಲ್ಲಿ ಬೈಕ್ ರ್ಯಾಲಿ

ಮುಂಡಗೋಡ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಎಸ್.ಪಕ್ಕಿರಪ್ಪ ನೇತೃತ್ವದಲ್ಲಿ ಡಾ||ಬಾಬಾ ಸಾಹೇಬ ಅಂಬೇಡ್ಕರವರ 64 ನೇ ಪುಣ್ಯತಿಥಿ ಅಂಗವಾಗಿ ಪಟ್ಟಣದಲ್ಲಿ ಬೈಕ ರ್ಯಾಲಿ ಹಮ್ಮಿಕೊಳ್ಳಲಾಯಿತು.
ಬೈಕ್ ರ್ಯಾಲಿ ಪಟ್ಟಣದ ಅಂಬೇಡ್ಕರ ಸಹಕಾರಿ ಸಂಘದಿಂದ ತರೆಳಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕಲಘಟಗಿ ರಸ್ತೆಯಲ್ಲಿರುವ ಅಂಬೇಡ್ಕರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಸರಕಾರಿ ಆಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು ಹಂಪಲಗಳನ್ನು ವಿತರಿಸಿದರು.

Categories: ಚಿತ್ರ ಸುದ್ದಿ

Leave A Reply

Your email address will not be published.