ಸಾರ್ವಜನಿಕ ಜೀವನದಲ್ಲಿ ನಾನು ತೆರೆದಿಟ್ಟ ಪುಸ್ತಕದಂತೆ ಬದುಕಿದ್ದೇನೆ: ಬಿಜೆಪಿ ಅಭ್ಯರ್ಥಿ ಹೆಬ್ಬಾರ್

ಮುಂಡಗೋಡ: ನನ್ನ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ನಾವೆಲ್ಲ ತೆರೆದಿಟ್ಟ ಪುಸ್ತಕದಂತೆ ಬದುಕಿದ್ದೇವೆ. ಆದರೆ ಜಿಲ್ಲೆಯಲ್ಲಿ 25 ರಿಂದ 30 ವರ್ಷಗಳ ಕಾಲ ಆಡಳಿತ ಮಾಡಿದ ಒಬ್ಬರೆ ರಾಜ್ಯ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡಿರುವ ಇವರು ಈ ರೀತಿಯಾದ ಕೀಳು ಮಟ್ಟದ ರಾಜಕಾರಣ ಮಾಡುವರೆಂದು ನಾನೆಂದೂ ನಿರೀಕ್ಷೆ ಮಾಡಿರಲಿಲ್ಲ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರರು ಪರೋಕ್ಷವಾಗಿ ಆರ್.ವಿ. ದೇಶಪಾಂಡೆ ವಿರುದ್ಧ ಹರಿಹಾಯ್ದರು.

ಪಟ್ಟಣದಲ್ಲಿ ಹಳೂರ ಮಾರಿಕಾಂಬಾ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಪ್ರಮುಖ ಬೀದಿಗಳಲ್ಲಿ ಬೃಹತ್‍ರ್ಯಾಲಿ ನಡೆಸಿ ಬಂದು ಶಿವಾಜಿ ಸರ್ಕಲ್ ನಲ್ಲಿ ಬಹಿರಂಗ ಪ್ರಚಾರದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ದೇಶದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪನವರ ನಾಯಕತ್ವದಲ್ಲಿ ಅದ್ವಿತೀಯ ಕೊಡುಗೆ ನೀಡುವ ಚುನಾವಣೆ ಇದು. ರಾಜ್ಯ ಸರ್ಕಾರದ ಸುಭದ್ರತೆಗೆ ನಡೆಯುವ ಈ ಉಪ ಚುನಾವಣೆ ಇದು ಕೇವಲ ಒಬ್ಬ ಅಭ್ಯರ್ಥಿಯ ಚುನಾವಣೆ ಅಲ್ಲಾ ಭಾರತೀಯ ಜನತಾ ಪಾರ್ಟಿಯ ವಿಜಯಕ್ಕೆ ಸಾರಥ್ಯರಾಗಬೇಕೆಂದು ಮತದಾರರಲ್ಲಿ ಕೇಳಿಕೊಂಡರು.

ಜಿಲ್ಲೆಯಲ್ಲಿ 25 ರಿಂದ 30 ವರ್ಷಗಳ ಕಾಲ ಆಡಳಿತ ಮಾಡಿದ ಒಬ್ಬರೆ ರಾಜ್ಯ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡಿರುವ ಅವರು ಗೆಲ್ಲುವುದಕ್ಕೋಸ್ಕರ ಸಚಿವ ಸ್ಥಾನ ಕಳೆದುಕೊಂಡ ಮೇಲೆ ಇಂತಹ ಹತಾಶ ರಾಜಕಾರಣ ಮಾಡುತ್ತ ಬಂದಿದ್ದಾರೆ. ಯಾವುದೋ ಒಂದು ಕೀಳು ದರ್ಜೆಯ ಪತ್ರಿಕೆಯಲ್ಲಿ ಏನೇನೋ ಬರೆಯಿಸಿ ತಾವು ಉಳಿಯಬೇಕು ಅನ್ನುವ ಯೋಚನೆ ಅವರ ಕನಸು ಮನಸ್ಸಿನಲ್ಲೂ ಆಗದುಎಂದು ಹೇಳಿದರು.

ವಾಕರಸಾ ನಿಗಮದ ಅಧ್ಯಕ್ಷ ವಿ.ಎಸ್. ಪಾಟೀಲ ಮಾತನಾಡಿ ಒಬ್ಬ ಗ್ರಾ.ಪಂ. ಸದಸ್ಯ ಕೂಡಾ ರಾಜೀನಾಮೆ ನೀಡಲು ಹಿಂಜರಿಯುತ್ತಾರೆ. ಅಂತಹದರಲ್ಲಿ 17 ಜನ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ದಿ ಪಡಿಸಿ ಒಳ್ಳೆಯ ಸರ್ಕಾರರಾಜ್ಯದಲ್ಲಿರಬೇಕುಎಂದುತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಚುನಾವಣೆಗೆ ಬಂದಿದ್ದಾರೆ. ಆದ ಕಾರಣ ಹೆಚ್ಚಿನ ಮತಗಳ ಅಂತರದಿಂದ ಹೆಬ್ಬಾರರನ್ನು ಆಯ್ಕೆ ಮಾಡಬೇಕು ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಶಿವರಾಮ ಹೆಬ್ಬಾರರಿಗೆ ಯಡಿಯೂರಪ್ಪನವರ ಹಾಗೂ ಪ್ರಧಾನಿ ಮೋದಿಯವರ ಆಶೀರ್ವಾದವಿದೆ. ಹೆಬ್ಬಾರರಿಗೆ ಯಲ್ಲಾಪುರ ಕ್ಷೇತ್ರದ ಮತದಾರರ ಆಶೀರ್ವಾದವು ಇದೆ. ಶಿವರಾಮ ಹೆಬ್ಬಾರ ನಿಚ್ಚಳವಾಗಿ ಗೆದ್ದಾಗಿದೆ. ಫಲಿತಾಂಶದ ನಂತರ ಹೆಬ್ಬಾರ ಕ್ಯಾಬಿನೆಟ್ ಸಚಿವರಾಗಿ ಬರುತ್ತಾರೆ ಎಂದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.