ಮತದಾರರು ಹೆಬ್ಬಾರರಿಗೆ ತಕ್ಕ ಪಾಠ ಕಲಿಸಲಿದ್ದಾರೆ: ಮಾಜಿ ಸಚಿವ ವಿನಯ ಕುಮಾರ


ಶಿರಸಿ: ರಾಜಕೀಯ ಮೌಲ್ಯವನ್ನು ನಾಡಿಗೆ ಸಾರಿದ ಜಿಲ್ಲೆಯಲ್ಲಿ ಮತದಾರರ ಮತವನ್ನು ಕೋಟ್ಯಾಂತರ ರೂ ಹಣಕ್ಕೆ ಮಾರಿಕೊಂಡ ಶಿವರಾಮ ಹೆಬ್ಬಾರರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ ಸೊರಕೆ ಹೇಳಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಹೆಬ್ಬಾರ ಸಾಕಷ್ಟು ಹಣ, ಹೆಂಡ ಹಂಚುತ್ತಿದ್ದು, ಅದನ್ನೆಲ್ಲಾ ಮೆಟ್ಟಿ ನಿಂತು ಮತದಾರರು ಅರ್ಹರಿಗೆ ಮತ ಚಲಾಯಿಸುತ್ತಾರೆ. ಆದ ಕಾರಣ ನೂರಕ್ಕೆ ನೂರು ಭೀಮಣ್ಣ ನಾಯ್ಕ ಗೆಲುವು ಖಚಿತ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್ ಮಾತನಾಡಿ, ಮೊದಲ ಬಾರಿಗೆ ಮೌಲ್ಯದ ಮೇಲೆ ಚುನಾವಣೆ ನಡೆಯುತ್ತಿದೆ. ಹೊಸ ಮತದಾರರು ಕಾಂಗ್ರೆಸ್ ಕೈಹಿಡಿಯಲಿದ್ದಾರೆ. ಈ ಬಾರಿ ಬೂತ್ ಕಮಿಟಿಯಲ್ಲಿ ಯುವಕರು ಮುಂದಿದ್ದಾರೆ. ಹೆಬ್ಬಾರ ತಂತ್ರಕ್ಕೆ ಪ್ರತಿ ತಂತ್ರ ಹೆಣೆದಿದ್ದೇವೆ. ಹೆಬ್ಬಾರ ರಿಸರ್ವ್ ಪೊಲೀಸ್ ವಾಹನದೊಂದಿಗೆ ಪ್ರಚಾರ ನಡೆಸುತ್ತಾ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದರೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ ಆಳ್ವಾ ಮಾತನಾಡಿ, ಚುನಾವಣೆ ಯಾಕೆ ಬಂತು ಎಂಬುದು ಪ್ರತಿ ಮತದಾರರಿಗೆ ಗೊತ್ತಿದೆ. ಪಕ್ಷಾಂತರ ಮಾಡಿದವರಿಗೆ ದೇಶದ ಬೇರೆ ಬೇರೆ ಕಡೆ ಸೋಲು ಎದುರಾಗಿದ್ದು, ಇಲ್ಲೂ ಕೂಡ ಪುನರಾವರ್ತನೆಯಾಗಲಿದೆ. ಎಲ್ಲಾ ಕಡೆ ಅನರ್ಹರ ಬಗ್ಗೆ ಆಕ್ರೋಶವಿದೆ ಎಂದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.