ನಾವು ಯಾವುತ್ತೂ ಕಾಂಗ್ರೆಸಿಗರೆ: ಫಕ್ರುಸಾಬ ಬೆಂಡಿಗೇರಿ


ಮುಂಡಗೋಡ: ನಾವು ಕಾಂಗ್ರೆಸ್ ಪಕ್ಷ ಬಿಟ್ಟು ಬೇರೆ ಪಕ್ಷ ಸೇರುವುದಿಲ್ಲ ನಾವು ಪಕ್ಕಾ ಕಾಂಗ್ರೆಸಿಗರು ಎಂದು ದಿವಂಗತ ಬಿ.ಎಫ್ ಬೆಂಡಿಗೇರಿಯವರ ಹಿರಿಯ ಪುತ್ರ ಫಕ್ರುಸಾಬ(ಬಾಬ) ಬೆಂಡಿಗೇರಿ ಪತ್ರಕರ್ತರಿಗೆ ಮಂಗಳವಾರ ತಿಳಿಸಿದರು.

ನಮ್ಮ ತಂದೆಯವರು 35 ವರ್ಷಕ್ಕಿಂತ ಅಧಿಕ ಮುಂಡಗೋಡ ತಾಲೂಕಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ತಮ್ಮದೇ ಆದ ಛಾಪು ಮೂಡಿಸಿ ಮುಂಡಗೋಡನಲ್ಲಿ ಬೆಂಡಿಗೇರಿ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಬೆಂಡಿಗೇರಿ ಅಂತ ನಿರ್ಮಾಣ ಮಾಡಿದವರು. ಬೇರೆ ಪಕ್ಷದವರು ಎಷ್ಟೇ ಆಮೀಷ ಒಡ್ಡಿದರು ಸಹ ನಮ್ಮ ತಂದೆಯವರು ಕಾಂಗ್ರೆಸ್ ಪಕ್ಷ ಬಿಟ್ಟವರಲ್ಲ ಅವರ ಕೊನೆಯುಸಿರುವವರೆಗೂ ಕಾಂಗ್ರೆಸ್‍ನಲ್ಲಿದ್ದರು ಅಂತವರ ಮಕ್ಕಳಾದ ನಾವು ಫಕ್ರುಸಾಬ, ಅಲೆಮುಸ್ತಫಾ, ಆಲೇಹಸನ ಹಾಗೂ ಬಿ.ಎಫ್.ಬೆಂಡಿಗೇರಿ ಸಹೋದರರಾದ ಗೌಸಮೋದ್ದಿನ ಬೆಂಡಿಗೇರಿ ಸಹ ಎಂತಾ ಕಠಿಣ ಪರಿಸ್ಥಿತಿಯಲ್ಲಿಯೂ ನಾವು ಕಾಂಗ್ರೆಸ್ ಜತೆಯಲ್ಲಿರುತ್ತೇವೆ. ಆದರೆ ಇತ್ತಿಚಿಗೆ ಪತ್ರಿಕೆಗಳಲ್ಲಿ ಬೆಂಡಿಗೇರಿ ಅಡ್ಡಹೆಸರಿನ ನವರು ತಮ್ಮ ವಯಕ್ತಿಕವಾಗಿ ಬೇರೆ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂಬುದು ಕಂಡು ಬರುತ್ತದೆ ಅದಕ್ಕೂ ನಮಗೂ ಯಾವುದೇ ಸಂಬಂದವಿಲ್ಲ. ನಾವು ಬುಡನ್‍ಸಾಬ ಬೆಂಡಿಗೇರಿಯವರ ಪುತ್ರರು ಹಾಗೂ ಅವರ ಸಹೋದರ ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ವಿಧೇಕರಾಗಿರುತ್ತೇವೆ ಎಂದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.