ವಿರೋಧ ಪಕ್ಷದವರು ನನ್ನ ಹಾದಿಯನ್ನೇ ಹಿಂಬಾಲಿಸುತ್ತಿದ್ದಾರೆ: ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ


ಮುಂಡಗೋಡ: ನನ್ನ ವಿರೋಧ ಪಕ್ಷದವರು ನಾನು ನಡೆದ ದಾರಿಯನ್ನೇ ಹಿಂಬಾಲಿಸುತ್ತಿದ್ದನ್ನು ನೋಡಿದರೆ ನನ್ನಷ್ಟಕ್ಕೆ ನನಗೆ ಒಂದು ರೀತಿಯಲ್ಲಿ ಖುಷಿ ಹೆಮ್ಮೆ ಆಗುತ್ತದೆ ಎಂದು ಯಲ್ಲಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ಹೇಳಿದರು.

ಅವರು ಪಟ್ಟಣದ ಶಿರಶಿ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಕೆಲವರು ನಾಮಧಾರಿಗಳ ಮತಗಳು ಹೆಚ್ಚಾಗಿವೆ ಎಂದು ಓಡಾಡುತ್ತಿದ್ದಾರೆ. ಆದರೆ ಇವರು ನಾಮಧಾರಿಗಳ ಮತಗಳನ್ನು ಹೇಗೆ ಕೇಳುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಯಾವುದೇ ನಾಮಧಾರಿಗಳ ಸಭೆ ಸಮಾರಂಭದಲ್ಲಿ ಇವರ ಹೆಸರು ಹಾಕಿದರೆ ಇವರು ಸಭೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಅಂತವರಿಗೆ ಯಾವ ನೈತಿಕತೆ ಇದೆ ಎಂದರು.

ನಾನು ಈ ಹಿಂದೆ ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿದ್ದರಿಂದ ಈ ಚುನಾವಣೆಯ ಗೆಲುವು ನನಗೆ ಕಷ್ಟ ಎನಿಸುತ್ತಿಲ್ಲ. ನಮ್ಮದೇ ಆದ ಸಂಘಟನೆ ನಡೆಸಿ ಪ್ರಚಾರ ನಡೆಸುತ್ತಿದ್ದೆವೆ. ಮಹಿಳೆಯರು, ಅಂಗವಿಕಲರು, ಕನ್ನಡ ಪರ ಸಂಘಟನೆಗಳು ನಮ್ಮ ಪರ ಅಚ್ಚುಕಟ್ಟಾದ ಸಂಘಟನೆಯಲ್ಲಿ ತೊಡಗಿದ್ದಾರೆ. ಇದರಿಂದ ಜನರಲ್ಲಿ ರೈತರಲ್ಲಿ ಆತ್ಮವಿಶ್ವಾಸ ಖುಷಿ ತಂದಿದೆ ಎಂದರು.

ನಮ್ಮ ಪಕ್ಷ ಬಡವರ ಪಕ್ಷವಾಗಿದ್ದು ನಿಷ್ಠಾವಂತ ಕಾರ್ಯಕರ್ತರು ನಮ್ಮ ಪಕ್ಷದಲ್ಲಿದ್ದಾರೆ. ಕೆಲವರು ಹಣದ ಅಬ್ಬರದಲ್ಲಿ ತೇಲಿಕೊಂಡು ಹೋಗಿರಬಹುದು ಎಲ್ಲರೂ ಆಮಿಷಕ್ಕೆ ಒಳಗಾಗಿದ್ದಾರೆ ಎಂದು ಹೇಳಲು ಆಗುವುದಿಲ್ಲ ಎಂದರು.

ಸುಮಿತಾ ಹೆಗಡೆ ಮತ್ತು ಸುನೀತಾ ತಳವಾರ ಮಾತನಾಡಿದರು. ಕರೆಮ್ಮಾ ನಾಯ್ಕ, ಶಾಲಿನಿ ರೈ.ರಾಜೇಶ್ವರಿ ಸೇಲಂ, ಹಾಗೂ ಕವಿತಾ ಮುಂತಾದವರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.