ಮಿಮಿಕ್ರಿ ಸ್ಪರ್ಧೆ: ಮಿಥುನ ರಾಜ್ಯಮಟ್ಟಕ್ಕೆ ಆಯ್ಕೆ


ಕುಮಟಾ: ತಾಲೂಕಿನ ಊರಕೇರಿ ರಾಮನಾಥ ಪ್ರೌಢಶಾಲೆಯ ಮಿಥುನ ರಾಮಚಂದ್ರ ನಾಯ್ಕ ಸತತ ಮೂರು ವರ್ಷ ಮಿಮಿಕ್ರಿ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮಿಗನಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಹೊನ್ನಾವರದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿಕೊಂಡು ಬಂದಿರುವ ಮಿಥುನನಿಗೆ ಶಾಲಾ ಮುಖ್ಯಾಧ್ಯಾಪಕರು, ಪಾಲಕರು, ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಇಲಾಖಾ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.