ಜಾತಿ ಧರ್ಮದ ಹೆಸರಲ್ಲಿ ರಾಜಕಾರಣ ಮಾಡಲ್ಲ, ಎಲ್ಲರೂ ಸಮಾನರು: ಶಿವರಾಮ ಹೆಬ್ಬಾರ


ಮುಂಡಗೋಡ: ಬಿಜೆಪಿಯಲ್ಲಿ ಯಾವಾಗಲು ಜಾತಿ ಧರ್ಮದ ರಾಜಕಾರಣ ಮಾಡುವುದಿಲ್ಲಾ ಎಲ್ಲರನ್ನು ಸರಿಸಮವಾಗಿ ಕಾಣುತ್ತಾರೆ. ಆದರೆ ಕಾಂಗ್ರೇಸ್‍ನವರು ಅಲ್ಪ ಸಂಖ್ಯಾತರನ್ನು ಅಂಗಿಯನ್ನಾಗಿ ಮಾಡಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ, ನೀವೆ ನಮ್ಮ ಜೊತೆಯಲ್ಲಿದ್ದರೆ ಕಾಂಗ್ರೇಸ್ ಬೆತ್ತಲಾಗುತ್ತದೆ ಎಂದು ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ ಹೇಳಿದರು.

ಅವರು ಪಟ್ಟಣದ ನೂರಾನಿಗಲ್ಲಿ, ಕಿಲ್ಲೆಓಣಿ, ಹಳೂರ ಓಣೆ, ಕಂಬಾರಗಟ್ಟಿ, ಗಾಂಧಿನಗರ, ಲಮಾಣಿ ತಾಂಡಾ, ಆನಂದ ನಗರದಲ್ಲಿ ಸೋಮವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಿದ್ದರು. ಕ್ಷೇತ್ರದ ಹತ್ತು ಹಲವು ಮುಖಂಡರು ಜಾತಿ ಧರ್ಮ ನೋಡದೆ ಎಲ್ಲ ಧರ್ಮದವರು ನನ್ನ ಜೊತೆಗೆ ಬಂದಿದ್ದಾರೆ ಹಾಗೂ ನಾನು ರಾಜಕಾರಣದಲ್ಲಿ ಯಾವಾಗಲು ಬೇಧ- ಬಾವ ಮಾಡದೆ ಎಲ್ಲರನ್ನು ಸರಿಸಮನಾಗಿ ಜೊತೆಯಲ್ಲೆ ತೆಗೆದುಕೊಂಡು ಬಂದಿದ್ದೆನೆ. ಈ ಕ್ಷೇತ್ರದ ಅಭಿವೃದ್ದಿಯೆ ನನ್ನಗುರಿ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಚಿರರುಣಿಯಾಗಿದ್ದೆನೆ.

ಈ ಬಾರಿ ನಾನು ಬಿಜೆಪಿಯ ಕಮಲದ ಹೂವಿನ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದೇನೆ ಶಿವರಾಮ ಹೆಬ್ಬಾರರ ಫೊಟೊ ಕಂಡ ಕೂಡಲೇ ಹಸ್ತ ಎಂದು ಎಷ್ಟೋ ಮಹಿಳೆಯರು ತಿಳಿದಿದ್ದಾರೆ. ಆ ಕಾರಣದಿಂದ ನಾನು ಇದನ್ನು ಒತ್ತಿಒತ್ತಿ ಹೇಳುತ್ತಿದ್ದೇನೆ ಎಂದರು. ಕ್ಷೇತ್ರದಲ್ಲಿ ಅತಿಕ್ರಮಣ ಒಂದು ಜ್ವಲಂತ ಸಮಸ್ಯೆಯಾಗಿದೆ. ಅತಿಕ್ರಮಣ ಮತ್ತು ಮನೆ ಪಟ್ಟಾದ ಬಗ್ಗೆ ನಮ್ಮ ಮುಖಂಡರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ ಎಂದರು.

ವಾಕರಸಾ ನಿಗಮದ ಅಧ್ಯಕ್ಷ ವಿ.ಎಸ್. ಪಾಟೀಲ ಮಾತನಾಡಿ ಬಿಜೆಪಿ ಸರ್ಕಾರ ತಾಯಂದಿರ ಮೇಲೆ ಹೆಚ್ಚಿನ ವಿಶ್ವಾಸ ಇಟ್ಟಿದೆ. ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹುಟ್ಟಿನಿಂದ ಹಿಡಿದು ಅಂತ್ಯದವರೆಗೂ ಒಳ್ಳೆಯ ಯೋಜನೆಗಳನ್ನು ಕೊಟ್ಟಿದ್ದಾರೆ ಎಂದರು.

ಮಾಜಿ ಶಾಸಕ ಮುನಿರತ್ನ ಹೆಬ್ಬಾರರ ಪರ ಪಟ್ಟಣದ ಲಂಬಾಣಿ ತಾಂಡಾದಲ್ಲಿ ಮತ ಯಾಚಿಸಿ ಮಾತನಾಡಿ ನಾವು 17ಶಾಸಕರು ರಾಜೀನಾಮೆ ನೀಡಿದ್ದರಿಂದ ಬಿಜೆಪಿ ಸರ್ಕಾರ ಬಂದಿದೆ ಮತ್ತು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆ. ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ ಎಂದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.