ಎಲ್ಲ ಕ್ಷೇತ್ರದಲ್ಲೂ ಬಿಜೆಪಿಯೇ ಜಯಶಾಲಿಯಾಗಲಿದೆ: ಮುಜರಾಯಿ ಸಚಿವ ಕೋಟಾ ಶ್ರೀನಿವಾಸ

ಶಿರಸಿ: ಹತಾಶವಾಗಿರುವ ಕಾಂಗ್ರೆಸ್ ಬಿಜೆಪಿ ಸ್ಥಿರ ಸರ್ಕಾರ ನೀಡುತ್ತದೆ ಎಂಬ ಭಯದಲ್ಲಿ ಅಪಪ್ರಚಾರದಲ್ಲಿ ತೊಡಗಿಕೊಂಡಿದೆ. ಆದರೆ ಉಪ ಚುನಾವಣೆಯ 15 ಕ್ಕೆ 15 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಯಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರುವರೆ ವರ್ಷ ಯಡಿಯೂರಪ್ಪ ನವರು ಉತ್ತಮ ಆಡಳಿತ ನೀಡುತ್ತಾರೆ ಎಂದು ಅರಿವಾಗಿರುವ ಕಾರಣ ಕಾಂಗ್ರೆಸ್ ಹತಾಶವಾಗಿದೆ. ಆದರೆ ನಾವು ವಿಶ್ವಾಸದಿಂದ ಇದ್ದೇವೆ. ನಮ್ಮ ಸರ್ಕಾರ ಮುಂದುವರೆಯುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

ಯಲ್ಲಾಪುರ ಕ್ಷೇತ್ರದಲ್ಲಿ ಮನೆ ಮನೆ ಭೇಟಿ ನೀಡಿದ್ದೇವೆ. 231 ಬೂತ್ ಗಳ ಕುರಿತು ಚರ್ಚೆ ಮಾಡಿದ್ದೇವೆ. 58 ಶಕ್ತಿ ಕೇಂದ್ರ ಹಾಗೂ 9 ಮಹಾಶಕ್ತಿ ಕೇಂದ್ರ ಭೇಟಿ ಮಾಡಿದ ಅನುಭವದ ಆಧಾರದಲ್ಲಿ ಸ್ಪಷ್ಟವಾಗಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಹಣ, ಹೆಂಡ ಹಂಚಲಿದೆ ಎಂಬ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಕೋಟಾ, ಯಲ್ಲಾಪುರದಲ್ಲಿ ನಮ್ಮ ಗೆಲುವು ನಿಶ್ಚಿತವಾಗಿರುವ ಕಾರಣ ದೇಶಪಾಂಡೆ ಇಂತಹ ಮಾತನ್ನು ಹೇಳುತ್ತಿದ್ದಾರೆ. ಆದರೆ ದೇಶಪಾಂಡೆಯವರು ತಿರುಗಿ ನೋಡಬೇಕು. ಬಿಜೆಪಿ ಗೆಲುವು ಇಲ್ಲಿ ಸ್ಪಷ್ಟವಾಗಿದೆ ಎಂದರು. ಅಭ್ಯರ್ಥಿ ಹೆಬ್ಬಾರ್ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.