ಆರ‍್ವಿಡಿಯವರ ಹೆಸರನ್ನು ದ್ರೋಹಪಾಂಡೆ ಎಂದು ಬದಲಿಸುವುದು ಉತ್ತಮ: ಮಾಜಿ ಶಾಸಕ ಸುನಿಲ್ ಹೆಗಡೆ ವಾಗ್ದಾಳಿ


ಮುಂಡಗೋಡ: ಆರ್.ವಿ.ದೇಶಪಾಂಡೆಯವರ ಹೆಸರನ್ನು ಬದಲಿಸಿ ದ್ರೋಹಪಾಂಡೆ ಎಂದು ಬದಲಿಸುವುದು ಉತ್ತಮ. ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಇಡೀ ಉತ್ತರ ಕನ್ನಡ ಜಿಲ್ಲೆಯನ್ನು ಬಲಿ ತೆಗೆದುಕೊಂಡಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡುವ ಇವರಿಗೆ ವಯಸ್ಸಾದ ಮೇಲೆ ಅರಳೋ ಮರಳೋ ಆಗುತ್ತಿದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ದೇಶಪಾಂಡೆ ವಿರುದ್ಧ ವಾಗ್ದಾಳಿ ನಡೆಸಿದರು.

ಪಟ್ಟಣದ ಬಸವೇಶ್ವರ ದೇವಸ್ಥಾನದ ಹತ್ತಿರವಿರುವ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತದ್ದರು. ಆರ್.ವಿ.ದೇಶಪಾಂಡೆ ಅವರ ಕುತಂತ್ರದಿಂದ ಈ ಉಪಚುನಾವಣೆ ನಡೆಯುತ್ತಿದೆ. ಶಿವರಾಮ ಹೆಬ್ಬಾರರನ್ನು ಪಕ್ಷಾಂತರ ಮಾಡಿದವರು ಎಂದು ಹೇಳುತ್ತಾರೆ. ಈ ಮೊದಲು ಅವರು ಕೂಡ ಮಾಡಲಿಲ್ಲವೇ? ದ್ರೋಹಿ ಎಂಬ ಪದ ಸಂಪೂರ್ಣವಾಗಿ ದೇಶಪಾಂಡೆಯವರಿಗೆ ಸಲ್ಲುತ್ತದೆ. 25-30 ವರ್ಷರಾಜಕೀಯ ಮಾಡಿ ಹಳಿಯಾಳ-ಮುಂಡಗೋಡ ತಾಲೂಕುಗಳಿಗೆ ಯಾವುದೇ ಕಾರ್ಖಾನೆಯಾಗಲೀ, ನೀರಾವರಿ ಯೋಜನೆಯಾಗಲೀ ತಾರದೇ ಮತದಾರರಿಗೆ ಪಕ್ಷದ ಮುಖಂಡರಿಗೆ ದ್ರೋಹ ಮಾಡಿದ್ದಾರೆ. ಈಗ ಹಳಿಯಾಳ-ಜೋಯಿಡಾದವರಿಗೂ ದ್ರೋಹ ಮಾಡುತ್ತಿದ್ದಾರೆ ಇವೆಲ್ಲವೂ ಮಾತೃ ದ್ರೋಹವಲ್ಲವೇ.

ಮಾಜಿ ಶಾಸಕ ವಿ.ಎಸ್. ಪಾಟೀಲ ಮತ್ತು ಶಿವರಾಮ ಹೆಬ್ಬಾರ ಅವರಿಂದ ಕ್ಷೇತ್ರ ಅಭಿವೃದ್ಧಿಯಾಗಿದೆ. ಕಾಂಗ್ರೆಸ್‌ನವರಿಗೆ ಚುನಾವಣೆಯಲ್ಲಿ ಬೂತ್‌ಗಳಲ್ಲಿ ಏಜೆಂಟರಿಲ್ಲ. ಕೇವಲ ಅಪ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ದೋಣಿ ಮುಳುಗುತ್ತಿದೆ. ಕಾಂಗ್ರೆಸ್‌ನ ಖರ್ಗೆ, ಪರಮೇಶ್ವರ, ಡಿ.ಕೆ.ಶಿವಕುಮಾರ ಇಲಿಗಳಂತೆ ಹೊರ ಬೀಳುತ್ತಿದ್ದಾರೆ. ಈ ಉಪಚುನಾವಣೆಯಲ್ಲಿ 15 ಕ್ಕೆ 15 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನೂರಕ್ಕೆ ನೂರು ಶತಸಿದ್ಧ ಶಿವರಾಮ ಹೆಬ್ಬಾರ ಅವರು ಪೋಲಿಂಗ್ ಆದ ಶೇ.80 ರಷ್ಟು 1 ಲಕ್ಷ
ಮತಗಳನ್ನು ಪಡೆದು ಜಯಭೇರಿ ಬಾರಿಸಲಿದ್ದಾರೆ ಎಂದರು.

ಜಿಲ್ಲೆಯ ಉಸ್ತುವಾರಿ ಮಂತ್ರಿ ನೀವಿರುವಾಗ ನಿಮ್ಮ ಶಾಸಕ ಹೆಬ್ಬಾರ ಇರುವಾಗ ನೀವೇಕೆ ಮುಂಡಗೋಡ ತಾಲೂಕು ಅಭಿವೃದ್ಧಿ ಪಡಿಸಲಿಲ್ಲ. ಈಗ ಅಭಿವೃದ್ಧಿ ಬಗ್ಗೆ ಮಾತನಾಡಿ ಮತ ಕೇಳುತ್ತಿದ್ದೀರಿ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಬಂದ ಅನುದಾನವನ್ನು ಭ್ರಷ್ಟಾಚಾರಮಾಡಿದವರೇ ನೀವು. ಇವರಿಗೆ ಯಾವ ನೈತಿಕತೆ ಇದೆ. ದೇಶಪಾಂಡೆಯವರ ಆಟ ಮುಂಡಗೋಡದಲ್ಲಿ ಈಗ ನಡೆಯುವುದಿಲ್ಲ. ಅವರ ರಾಜಕೀಯ ಅಧ್ಯಾಯ ಮುಗಿದು ಅಂತಿಮ ಘಟ್ಟದಲ್ಲಿದ್ದಾರೆ.

ಈ ಹಿಂದೆ ಉಸ್ತುವಾರಿ ಮಂತ್ರಿಯಾಗಿದ್ದ ಇವರು ತಮ್ಮ ಸ್ಥಾನದ ದುರುಪಯೋಗಪಡಿಸಿಕೊಂಡು ಅಧಿಕಾರಿಗಳಿಗೆ ಹೇಳಿ ಹೆಬ್ಬಾರರಿಗೆ ತೊಂದರೆ ಕೊಟ್ಟು, ಸಹಕಾರ ನೀಡದೇ ಹೆಬ್ಬಾರರಿಗೆ ಅಭಿವೃದ್ಧಿ ಮಾಡಲು ಕೊಡದೇ ಇದ್ದದ್ದರಿಂದ ಮತ್ತು ಮಾನಸಿಕ ಕಿರುಕುಳದಿಂದ ಪಕ್ಷದಿಂದ ಹೊರಬಂದರು. ಈ ಕ್ಷೇತ್ರದ ಉಪ ಚುನಾವಣೆ ಆರ್.ವಿ. ದೇಶಪಾಂಡೆಯವರ ಕೊಡುಗೆಯಾಗಿದೆ ಅಷ್ಟೆ ಎಂದರು.

ರಾಮಕೃಷ್ಣ ಹೆಗಡೆ ಅವರು ಆರ್.ವಿ. ದೇಶಪಾಂಡೆ ಅವರನ್ನು ತಲೆಯ ಮೇಲೆ ಇಟ್ಟುಕೊಂಡಿದ್ದರು. ಆದರೆ ದೇಶಪಾಂಡೆ ಗುರುದ್ರೋಹ ಮಾಡಿದ್ದಾರೆ ರಾಮಕೃಷ್ಣ ಹೆಗಡೆ ಅವರ ಋಣ ತೀರಿಸಬೇಕಾದರೆ ಕಾಂಗ್ರೆಸ್‌ಗೆ ಮತ ಹಾಕಬಾರದು. ಅವರು ರಾಮಕೃಷ್ಣ ಹೆಗಡೆಯವರು ಇವರಿಗೆ ಮಂತ್ರಿ ಸ್ಥಾನ ಕೊಟ್ಟರು. ಎಲ್ಲ ರೀತಿಯ ಸಹಕಾರ ಕೊಟ್ಟರು. 1994ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ಇವರು ಮುಖ್ಯಮಂತ್ರಿಯಾಗುವ ದೃಷ್ಟಿಯಿಂದ ಆದ ಗಲಾಟೆಯ ಅಪಖ್ಯಾತಿಯನ್ನು ರಾಮಕೃಷ್ಣ ಹೆಗಡೆಯವರು ತಮ್ಮ ತಲೆಯ ಮೇಲೆ ಹಾಕಿಕೊಂಡರು. 1978ರಲ್ಲಿ ಕಾಂಗ್ರೆಸ್ ಬಿಟ್ಟು ಜನತಾ ಪಕ್ಷಕ್ಕೆ ಬಂದಿದ್ದು ಪಕ್ಷಾಂತರವಲ್ಲವೇ?ಎಂದು ಪ್ರಶ್ನಿಸಿದ ಅವರು ಜನತಾ ಪಕ್ಷ ಬಿಟ್ಟುಜನತಾ ದಳ ಪಕ್ಷಕಟ್ಟಲಿಲ್ಲವೇ ನಿಮಗೇಕೆ ಜನ ಶಿಕ್ಷೆ ನೀಡಲಿಲ್ಲ ಯಾಕೆ ಕೊಡಬಾರದು. 1999ರಲ್ಲಿ ಜನತಾದಳದಿಂದ ರಾಮಕೃಷ್ಣ ಹೆಗಡೆಯವರನ್ನು ಹೊರ ಹಾಕಿದಾಗ ಅವರ ಪರವಾಗಿರದೇ ಜೆ.ಎಚ್.ಪಟೇಲ ಸರ್ಕಾರದಲ್ಲಿ ಸಂಪೂರ್ಣವಾಗಿ ಮಂತ್ರಿ ಸ್ಥಾನದ ಮಜಾ ಉಡಾಯಿಸಿದರು ಎಂದು ವ್ಯಂಗವಾಡಿದರು.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.