ಬಂಕಿಕೊಡ್ಲದಲ್ಲಿ ವಿಜೃಂಭಣೆಯ ಕಾಶಿ ವಿಶ್ವನಾಥ ದೇವರ ರಥೋತ್ಸವ


ಗೋಕರ್ಣ: ಊರಿನೆಲ್ಲೆಡೆ ಸಂಭ್ರಮ, ಜಾತ್ರೆಯ ವಾತಾವರಣ ದೇವರ ದರ್ಶನ ಪೂಜೆ ಕೈಗೊಂಡ ಭಕ್ತರು, ಜನ ಸಾಗರ ಇವೆಲ್ಲದರ ನಡುವೆ ನಡೆದ ರಥೋತ್ಸವ ಇದು ಇಲ್ಲಿನ ಬಂಕಿಕೊಡ್ಲದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಚಂಪಾಷಷ್ಟಿ ಪ್ರಯುಕ್ತ ಸಾರಸ್ವತ್ ಸಮಾಜದಿಂದ ಸೋಮವಾರ ನಡೆದ ರಥೋತ್ಸವ ವಿಜೃಂಭಣೆಯಿಂದ ನಡೆದ ಬಗೆ.

ಮುಂಜಾನೆ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು. ಮಧ್ಯಾಹ್ನ ಕಾಶಿ ವಿಶ್ವನಾಥ ದೇವಾಲಯದಿಂದ ಗ್ರಾಮ ದೇವರಾದ ಬಂಕನಾಥೇಶ್ವರ ದೇವಾಲಯದವರೆಗೆ ರಥ ಸಾಗಿ ಪುನಃ ದೇವಾಲಯಕ್ಕೆ ಮರಳಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ರಥ ಎಳೆದು ಸಂಭ್ರಮಿಸಿದರು. ಸಂಜೆ ದೇವರ ಉತ್ಸವ ಮೃಗ ಬೇಟೆ ನೆರವೇರಸಿ, ಕಳಸದ ಕೇರಿಯಲ್ಲಿ ಪೂಜೆ ಸ್ವೀಕರಿಸಿ ದೇವಾಲಯಕ್ಕೆ ಮರಳಿತು. ಅಷ್ಠಾವಧಾನ ಸೇವೆ, ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.

ಕಂಚಿ ಹಣ್ಣಿನ ಖರೀದಿ: ಸಾಮಾನ್ಯವಾಗಿ ಚಂಪಾಷಷ್ಟಿಯಂದು ಪ್ರತಿ ಮನೆಯಲ್ಲೂ ಕುಂಬಳಕಾಯಿಯನ್ನು ಪದಾರ್ಥದಲ್ಲಿ ಬಳಸುವುದು ಈ ದಿನದ ವಿಶೇಷ ವಾಗಿದ್ದು, ಇದರಂತೆ ಇಲ್ಲಿನ ಜಾತ್ರೆಯಲ್ಲಿ ಸಕ್ಕರ ಕಂಚಿ (ಸಿಹಿ ಕಂಚಿ) ಹಣ್ಣು ಮಾರಾಟಕ್ಕೆ ಬರುತ್ತದೆ. ಇದನ್ನು ಖರೀದಿಸಲು ಭಕ್ತರು ಮುಗಿಬೀಳುವುದು ವಿಶೇಷ. ಅದರಂತೆ ಈ ದಿನದಂದು ಹಣ್ಣನ್ನು ಮನೆಗೆ ತೆಗೆದುಕೊಂಡು ಹೋಗುವ ಸಂಪ್ರದಾಯ ಅನಾದಿಕಾಲದಿಂದ ಬಂದಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.