ಕಾಂಗ್ರೆಸ್ ಪ್ರಚಾರ ಸಭೆ: ಭೀಮಣ್ಣ ಪರ ಮಾಜಿ ಸಚಿವ ಶಿವರಾಜ ತಂಗಡಗಿ ಪ್ರಚಾರ


ಶಿರಸಿ: ತಾಲೂಕಿನ ಬನವಾಸಿ ಬ್ಲಾಕ್‍ನ ದಾಸನಕೊಪ್ಪ ಪಂಚಾಯತದ ವದ್ದಲದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿಯವರು ಇಂದು ಡಿ.2 ರಂದು ಪ್ರಚಾರ ಸಭೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್‍ರ ಪರವಾಗಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಅನೇಕ ಯುವ ಕಾರ್ಯಕರ್ತರು ಕಾಂಗ್ರೆಸ್ ಪಕ್ಕಕ್ಕೆ ಸೇರ್ಪಡೆಯಾದರು. ಮಾಜಿ ಸಚಿವರೊಂದಿಗೆ ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಬ್ಲಾಕ್ ಅಧ್ಯಕ್ಷ ಸಿ.ಎಫ್. ನಾಯ್ಕ್, ಶಿರಸಿ ಬ್ಲಾಕ್ ಉಪಾಧ್ಯಕ್ಷ ಗಣೇಶ್ ಡಾವಣಗೇರಿ, ಬನವಾಸಿ ಬ್ಲಾಕ್ ಉಪಾಧ್ಯಕ್ಷ ಸಿದ್ಧನಗೌಡ ಬೆಣಗಿ, ಜಿ.ಪಂ ಸದಸ್ಯ ಬಸವರಾಜ ದೊಡ್ಮನಿ, ಘಟಕಾಧ್ಯಕ್ಷ ರಾಜಶೇಖರ ಗೌಡ, ಗ್ರಾಪಂ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ, ದೇವರಾಜ ಕೋವೇರ್ ಮುಂತಾದವರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.