ಸುವಿಚಾರ

ಪೇಟೀಚೀವರಪಟ್ಟವಸ್ತ್ರಪಟಲಶ್ವೇತಾತಪತ್ರಚ್ಛಟಾ
ಶಾಟೀಹಾರಕಘೋಟಕಸ್ಫುಟಘಟಾಟೋಪಾಯ ತುಭ್ಯಂ ನಮಃ |
ಯೇನಾನಕ್ಷರಕುಕ್ಷಯೋಪಿ ಜಗತಃ ಕುರ್ವಂತಿ ಸರ್ವಜ್ಞತಾ
-ಭ್ರಾಂತಿಂ ಯೇನ ವಿನಾ ತು ಹಾಸ್ಯಪದವೀಂ ಸಂತೋಪಿ ಕಷ್ಟಂ ಗತಾಃ ||

ತಲೆಗೊಂದು ಪೇಟ, ರೇಶ್ಮೆವಸ್ತ್ರ, ಹೆಗಲಿಂದ ಇಳಿಬೀಳುವ ಶಾಲು, ತಲೆ ಮೇಲೆ ನೆರಳು ಸೂಸುವ ಬೆಳ್ಗೊಡೆ, ಕೊರಳಲ್ಲಿನ ಹಾರ, ಮೈಯನ್ನೆಲ್ಲ ಆವರಿಸುವ ಬೇರೆ ಬೇರೆ ವಿಧವಾದ ಭಾರೀ ಭೂರಿ ಬಟ್ಟೆಗಳು, ದೊಡ್ಡ ದೊಡ್ಡದಾಗಿ ಮೊಳಗುವ ಕಂಠಧ್ವನಿ… ಆಹಾ ಈ ಬಗೆಯ ಜನಕ್ಕೆ ನಮೋ ನಮಃ. ಈ ವೇಷಾಂಡಂಬರಗಳಿಂದಲೇ ಒಂದಕ್ಷರ ಬಾರದೇ ಇದ್ದರೂ ಕೆಲವರು ಜಗತ್ತಿನಲ್ಲಿ ತಾವು ಸರ್ವಜ್ಞರೇನೋ ಅನ್ನುವ ಭ್ರಮೆಯನ್ನು ಕಟ್ಟಿಕೊಡುತ್ತಾರೆ. ಒಳ್ಳೆಯವರಾಗಿದ್ದರೂ ಈ ಮೇಲಿನ ತೋರಿಕೆಗಳಿಲ್ಲದೇ
ಇದ್ದುದಕ್ಕೆ ಕೆಲವರು ಜನರಿಂದ ಹಾಸ್ಯಾಸ್ಪದರೆಂಬಂತೆ ನೋಡಲ್ಪಡುತ್ತಿದ್ದಾರೆ. ಆಡಂಬರವಾಗಿ ವೇಷ ಮಾಡಿಕೊಂಡು ನಮ್ಮ ಟೀವಿ ಜ್ಯೋತಿಷಿಗಳಂತೆ ವರ್ತಿಸುವವರು ಮಾನವ ಸಮಾಜದಲ್ಲಿ ಎಂದೆಂದಿಗೂ ಇದ್ದರು ಅನ್ನಿಸುತ್ತದೆ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.