ಸುವಿಚಾರ

ಯಥಾ ಬೀಜಂ ವಿನಾ ಕ್ಷೇತ್ರಮುಪ್ತಂ ಭವತಿ ನಿಷ್ಫಲಮ್
ತಥಾ ಪುರುಷಕಾರೇಣ ವಿನಾ ದೈವಂ ನ ಸಿದ್ಧ್ಯತಿ ||

ನೆಲವನ್ನೆಷ್ಟು ಉತ್ತು, ಹದಮಾಡಿ ನೀರು ಹಾಯಿಸಿ ಎಂತದೇ ಮಾಡಿದರೂ ಬೀಜಾವಾಪ ಮಾಡದೇ ಇದ್ದರೆ ಹೇಗೆ ಪ್ರಯೋಜನವೇ ಇಲ್ಲವೋ ಹಾಗೇಯೇ ಕಾರ್ಯವೊಂದನ್ನು ಸಾಧಿಸುವಾಗ ಪುರುಷಪ್ರಯತ್ನವೆಂಬುದು ಇಲ್ಲದೇ ಕೇವಲ ದೈವಬಲದಿಂದ ಏನೇನೂ ಆಗದು. ಪುರುಷಪ್ರಯತ್ನವಿದ್ದಾಗ ಮಾತ್ರವೇ ದೈವವು ತನ್ನ ಮಹಿಮೆಯನ್ನು ಕ್ವಚ್ಚಿತ್ತಾಗಿ ತೋರಬಲ್ಲದು.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.