ಸುವಿಚಾರ

ಸಾಕ್ಷರಾ ವಿಪರೀತಾಶ್ಚೇತ್ ರಾಕ್ಷಸಾ ಏವ ಕೇವಲಮ್
ಸರಸೋ ವಿಪರೀತಶ್ಚೇತ್ಸರಸತ್ವಂ ನ ಮುಂಚತಿ ||

ವಿವೇಕ ಹೀನವಾದ, ನಾಮಮಾತ್ರ ಸಾಕ್ಷರತೆಯ ವ್ಯರ್ಥತೆಯನ್ನು ಆಡಿಕೊಳ್ಳುವ ಪದ್ಯವಿದು. ಸಾಕ್ಷರಾಃ ಅನ್ನುವ ಸಂಸ್ಕೃತದ ಪದವನ್ನು ತಿರುವು ಮುರುವಾಗಿ ಹೇಳಿದರೆ ರಾಕ್ಷಸಾ ಅನ್ನುವ ಪದವಾಗುತ್ತದೆ. ಅಕ್ಷರ ಕಲಿತವರು ವಿವೇಕಹೀನರಾದರೆ ರಾಕ್ಷಸರಾಗುತ್ತಾರೆ ಅನ್ನುವುದಕ್ಕೆ ಸ್ವತಃ ಆ ಪದವೇ ರೂಪಕವಾಗಿದೆ. ವರ್ಷದ ಹಿಂದೆ ಜೆ ಎನ್ ಯೂ ಎನ್ನುವ ಪ್ರತಿಷ್ಠಿತ ವಿ.ವಿ. ಯ ಆವರಣದಲ್ಲಿ ದೇಶವನ್ನು ತುಂಡರಿಸುವ ಮಾತಾಡಿದವರೂ ಸಾಕ್ಷರರೇ ಅನ್ನುವುದನ್ನು ನೆನಪು ಮಾಡಿಕೊಂಡರೆ ಈ ಮಾತು ಇನ್ನಷ್ಟು
ಸ್ಪಷ್ಟವಾಗುತ್ತದೆ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.