ಶಿರಸಿ: ಹಗುರ ಮಾತಿನಿಂದ ಸಂಸದ ಅನಂತಕುಮಾರ ಹೆಗಡೆಗೆ ಮಂತ್ರಿಗಿರಿ ತಪ್ಪಿದೆ. ಸ್ಟಾರ್ ಪ್ರಚಾರಕ ಪಟ್ಟವೂ ಇಲ್ಲವಾಗಿದೆ. ಇದರಿಂದ ಸಂಸದರೇ ಕಾಂಗ್ರೆಸ್ ಗೆ ಬರುವ ಸಾಧ್ಯತೆಯಿದೆ ಎಂದು ಜಿಲ್ಲಾ ಕಾಂಗ್ರೆಸ್ ನೂತನ ಮಾಧ್ಯಮ ವಕ್ತಾರ ದೀಪಕ ದೊಡ್ಡುರು ಲೇವಡಿ ಮಾಡಿದ್ದಾರೆ.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಸಂಸದ ಹೆಗಡೆ ಸಿದ್ದರಾಮಯ್ಯ ಕುರಿತು ನೀಡಿರುವ ಹೇಳಿಕೆ ವಿರೋಧಿಸಿದ ಅವರು, ರಾಜಕೀಯ ಭಾಷಣ ಹೆಗಡೆ ಮಾಡುತ್ತಾರೆ. ಆದರೆ ಅವರು ಅಭಿವೃದ್ಧಿ ಪೂರಕ ಭಾಷಣ ಮಾಡಬೇಕು ಎಂದು ಟೀಕಿಸಿದತು. ಬಿಜೆಪಿಯಲ್ಲಿ ಅವರು ಕಡೆಗಣನೆ ಆಗಿರುವುದು ನೋಡಿದಲ್ಲಿ ಅನಂತಕುಮಾರ ಹೆಗಡೆ ನಮ್ಮ ಪಕ್ಷಕ್ಕೆ ಬರುವ ಲಕ್ಷಣ ಕಾಣುತ್ತದೆ ಎಂದರು.
ಡಿ.5 ರಂದು ನಡೆಯುವ ಉಪ ಚುನಾವಣೆಯಲ್ಲಿ ರಾಜಕೀಯ ಕ್ಷೇತ್ರದ ಮೌಲ್ಯ ಉಳಿಸಿಕೊಳ್ಳಲು ಯಲ್ಲಾಪುರ ಭಾಗದ ಜನರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ. ಅನರ್ಹ ಶಾಸಕ ಹೆಬ್ಬಾರ್ ಗೆ ಕಾಂಗ್ರೆಸ್ ಪಕ್ಷ ಯಾವುದೇ ಅನ್ಯಾಯ ಮಾಡಿಲ್ಲ. ಸ್ವ ಹಿತಾಸಕ್ತಿಗೆ ಅವರು ಪಕ್ಷ ತೊರೆದಿದ್ದಾರೆ ಎಂದರು.
ಯಲ್ಲಾಪುರ ಕ್ಷೇತ್ರದ ಮತದಾರ ಅತ್ಯಂತ ಪ್ರಬುಧ್ಧ. ಆದ ಕಾರಣ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ಆಯ್ಕೆ ಖಚಿತ ಮತ್ತು ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಜಗದೀಶ ಗೌಡ, ಅಬ್ಬಾಸ್ ತೋನ್ಸೆ, ಬಸವರಾಜ ದೊಡ್ಮನಿ, ಗಾಯತ್ರಿ ನೇತ್ರೇಕರ ಮುಂತಾದವರು ಇದ್ದರು.
.