ಸುವಿಚಾರ

ನಾಗ್ನಿಸ್ತೃಪ್ಯತಿ ಕಾಷ್ಠಾನಾಂ ನಾಪಗಾನಾಂ ಮಹೋದಧಿಃ
ನಾಂತಕಃ ಸರ್ವಭೂತಾನಾಂ ನ ಪುಂಸಾಂ ವಾಮಲೋಚನಾಃ ||

ಅದೆಷ್ಟೇ ಕಟ್ಟಿಗೆಯಿದ್ದರೂ (ಇಂಧನ) ಅದರಿಂದ ಅಗ್ನಿಯು ತೃಪ್ತಿ ಹೊಂದಲಾರನು. ಎಷ್ಟಿದ್ದರೂ ಅದನ್ನು ತಿಂದು ಭಸ್ಮಗೊಳಿಸುವ ಧರ್ಮ ಅಗ್ನಿಯದ್ದು. ಹಾಗೇ ನದಿಗಳೆಷ್ಟೇ ನೀರು ತಂದು ಸುರಿದರೂ ಸಾಕು ಸಾಕೆನ್ನದ ಜಾಯಮಾನ ಸಾಗರನದು. ಮಳೆಗಾಲದಲ್ಲಿ ನದಿಯುಕ್ಕಿತೆಂದು ತಾನೂ ಉಕ್ಕಿಬಿಡದ, ಬೇಸಿಗೆಯಲ್ಲಿ ನದಿ ಸೊರಗಿತೆಂದು ತಾನು ಸೊರಗದ ಧರ್ಮ ಸಾಗರದ್ದು. ಭೂಮಿಯಲ್ಲಿನ ಎಲ್ಲ ಜೀವಜಂತುಗಳನ್ನು ಕೊನೆಗೊಳಿಸಿದರೂ ಯಮನು ತೃಪ್ತನಾಗನು. ಹಾಗೇ, ಸ್ತ್ರೀಯರು ಅದೆಷ್ಟು ಪುರುಷರಿದ್ದರೂ ಅವರಿಂದ ತೃಪ್ತರಾಗಲಾರರು.

–  ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.