ಸಮುದ್ರ ಸುಳಿಗೆ ಸಿಲುಕಿದ ಮಹಿಳೆಯರ ರಕ್ಷಣೆ


ಗೋಕರ್ಣ: ಸಮುದ್ರ ಸುಳಿಗೆ ಸಿಲುಕಿದ್ದ ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಓಂ ಕಡಲತೀರದಲ್ಲಿ ನಡೆದಿದೆ.

ಮುಂಬೈ ಮೂಲದ ವಿದೇಶಿ ಮಹಿಳೆ ಸೇರಿ ಮೂವರು ಯುವತಿಯರ ತಂಡ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು, ಸಮುದ್ರದಲ್ಲಿ ಈಜಾಡಲು ತೆರಳಿದ ವೇಳೆ ಒಬ್ಬರು ನೀರಿನ ಸುಳಿಗೆ ಸಿಲುಕಿ ಅಪಾಯದಲ್ಲಿರುವುದನ್ನು ಕರ್ತವ್ಯ ನಿರತ ಲೈಪ್ ಗಾರ್ಡ ಸಿಬ್ಬಂದಿಗಳಾದ ಪ್ರಭಾಕರ ಅಂಬಿಗ, ಹರೀಶ ಹರಿಕಾಂತ, ಪಾಂಡುರಂಗ ಅಂಬಿಗ ಗಮನಿಸಿದ್ದು, ತಕ್ಷಣ ಧಾವಿಸಿ ಜೀಪಾಯದಿಂದ ಪಾರು ಮಾಡಿದ್ದಾರೆ. ಭವಾನಿ (20) ಜೀವಾಪಾಯದಿಂದ ಪಾರಾಗಿ ಬಂದ ಪ್ರವಾಸಿ ಯುವತಿಯಾಗಿದ್ದಾಳೆ.

Categories: ಚಿತ್ರ ಸುದ್ದಿ

Leave A Reply

Your email address will not be published.