ನ.18 ಕ್ಕೆ `ಕ್ರೀಡಾ ಪುನಶ್ಚೇತನ’ ಕಾರ್ಯಾಗಾರ

ಕಾರವಾರ: ಉ.ಕ. ಜಿಲ್ಲಾ ಕ್ರೀಡಾ ಪ್ರತಿಷ್ಠಾನ, ಜಿಲ್ಲಾ ಸರಕಾರಿ ನೌಕರರ ಸಂಘ ಹಾಗೂ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಗಳ ಸಹಯೋಗದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ `ಕ್ರೀಡಾ ಪುನಶ್ಚೇತನ’ ಕಾರ್ಯಾಗಾರ ನ.18 ರಂದು ನಗರದಲ್ಲಿ ಕಮ್ಮಟ ಜರುಗಲಿದೆ.

ಕಾರ್ಯಾಗಾರದಲ್ಲಿ ಪ್ರಾಯೋಗಿಕ ಪಾಠಗಳ ಜೊತೆಗೆ ಅಥ್ಲೆಟಿಕ್ ಕ್ರೀಡಾಪಟುಗಳ ಪ್ರದರ್ಶನ ಹಾಗೂ ಕೌಶಲ ಹೆಚ್ಚಿಸಲು ಶಿಕ್ಷಕರು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಉಪನ್ಯಾಸ ಮಾಲಿಕೆಗಳು ನಡೆಯಲಿವೆ. ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರು ಹಾಗೂ ಹುಬ್ಬಳ್ಳಿಯ ಕಿಮ್ಸ್ ವೈದ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರು ಆಗಮಿಸಲಿದ್ದಾರೆ. ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಹಿರಿಯ ಕ್ರೀಡಾಪಟುಗಳೂ ಕಮ್ಮಟದಲ್ಲಿ ಹಾಜರಿದ್ದು ಶಿಬಿರಾರ್ಥಿಗಳೊಂದಿಗೆ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ಭಾಗವಹಿಸಲಿಚ್ಛಿಸುವ ದೈಹಿಕ ಶಿಕ್ಷಣ ಶಿಕ್ಷಕರು, ತರಬೇತುದಾರರು ಹಾಗೂ ಕ್ರೀಡಾಪಟುಗಳು ಪ್ರತಿಷ್ಠಾನದ ಕಾರ್ಯಾದರ್ಶಿ ಮಹಾಂತೇಶ ಓಶಿಮಠ 9448291735 ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.