ದಿವಾಕರ ಕೆರೆಹೊಂಡ ರಚಿತ ‘ಕನಕ ಜಾನಕಿ’ ಏಕವ್ಯಕ್ತಿ ಆಖ್ಯಾನ ಯಶಸ್ವಿ

ಸಿದ್ದಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಯಕ್ಷಚಂದನ ದಂಟಕಲ್ ಇವರಿಂದ ಏಕ ವ್ಯಕ್ತಿ ಯಕ್ಷಗಾನ ತಾಳಮದ್ದಳೆ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಶನಿವಾರ ನಡೆಯಿತು.
ಯಕ್ಷಗಾನ ಅಕಾಡೆಮಿ ಸದಸ್ಯ ದಿವಾಕರ ಹೆಗಡೆ ಕೆರೆಹೊಂಡ ಇವರು ತಾವೇ ಸಿದ್ದಪಡಿಸಿದ ಕನಕ ಜಾನಕಿ ಆಖ್ಯಾನವನ್ನು ಏಕ ವ್ಯಕ್ತಿ ತಾಳಮದ್ದಳೆಯಲ್ಲಿ ಜಾನಕಿ (ಸೀತೆ)ಯ ಜೀವನದ ಚಿತ್ರಣವನ್ನು ವಿವರವಾಗಿ ಬಿಂಬಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ ಹೆಗಡೆ ದಂಟಕಲ್ ಮದ್ದಳೆಯಲ್ಲಿ ಶರತ್ ಹೆಗಡೆ ಜಾನಕೈ ಸಹಕರಿಸಿದರು. ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.