ಸರ್ವಮತ-ಸರ್ವಸಮ್ಮತ ಸುಪ್ರೀಂ ತೀರ್ಪನ್ನು ಸ್ವಾಗತಿಸೋಣ; ಸ್ಪೀಕರ್ ಕಾಗೇರಿ

ಶಿರಸಿ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯ ವಿಷಯದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಮೂಲಕ ಕೋಟ್ಯಂತರ ಭಾರತೀಯರ ಭಾವನೆಗೆ ಬೆಲೆ ನೀಡಿ, ಈ ಹಿಂದಿನ ಎಲ್ಲ ಜಿಜ್ಞಾಸೆಗಳಿಗೆ ತೆರೆ ಎಳೆದಿದೆ. ನಾವೆಲ್ಲರೂ ಸುಪ್ರೀಂ ಕೋರ್ಟಿನ ಈ ಸರ್ವಮತ-ಸರ್ವಸಮ್ಮತ ತೀರ್ಪನ್ನು ಸ್ವಾಗತಿಸೋಣ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಸಮತೋಲಿತ ತೀರ್ಪು ಸೌಹಾರ್ದತೆ, ಸಹಬಾಳ್ವೆಯ ರಾಮರಾಜ್ಯದ ಕನಸನ್ನು ಇನ್ನಷ್ಟು ಪುಷ್ಟೀಕರಿಸಿದೆ. ಅಯೋಧ್ಯೆಯ ಶ್ರೀ ರಾಮಮಂದಿರ ಭವ್ಯಭಾರತದ ಏಕತೆಯ ದ್ಯೋತಕವಾಗಲಿ ಎಂದು ಅವರು ಆಶಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.