ನ. 12ಕ್ಕೆ ಗೋಕರ್ಣದಲ್ಲಿ ತ್ರಿಪುರಾಖ್ಯ ದೀಪೋತ್ಸವ

ಗೋಕರ್ಣ: ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯದ ವಿಕಾರಿ ಸಂವತ್ಸರದ ತ್ರಿಪುರಾಖ್ಯ ದೀಪೋತ್ಸವ ನ. 12 ಮಂಗಳವಾರರಂದು ಜರುಗಲಿದೆ. ಇದರ ಪ್ರಯುಕ್ತ ಮಧ್ಯಾಹ್ನ  ಲಕ್ಷ ಬಿಲ್ವಾರ್ಚನಾ ಹವನ , ನೈಮಿತ್ತಿಕ ಬಲಿ  ನಂತರ ಶ್ರೀದೇವರ ಉತ್ಸವ ಭೀಮಕೊಂಡಕ್ಕೆ ಹೋಗಿ ಅಲ್ಲಿ ಧಾತ್ರಿ ಹವನ , ವನಭೋಜನ ನಡೆಯಲಿದ್ದು, ನಂತರ ಉತ್ಸವ ದೇವಾಲಯಕ್ಕೆ ಮರಳುತ್ತದೆ. ರಾತ್ರಿ ಲಕ್ಷ ದೀಪೋತ್ಸವ , ಕೋಟಿತೀರ್ಥದಲ್ಲಿ ಜಲಾಯನ ದೀಪೋತ್ಸವ , ತೆಪ್ಪೋತ್ಸವ ಹಾಗೂ ರಥಬೀದಿಯಲ್ಲಿ ರಥೋತ್ಸವ ಜರುಗಲಿದೆ. ಈ ಎಲ್ಲಾ ದೈವಿಕ ಕಾರ್ಯಗಳಿಗೆ ಭಕ್ತಾಧಿಗಳು ಆಗಮಿಸುವಂತೆ ದೇವಾಲಯ ಪ್ರಕಟಣೆಯಲ್ಲಿ ಕೋರಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.