ಹಿಂದುಳಿದ ರೈತರಿಗೆ ಸಹಾಯಧನದ ಪ್ರಯೊಜನ ಪಡೆಯಲು ತೋಟಗಾರಿಕಾ ಇಲಾಖೆ ಸೂಚನೆ

ಶಿರಸಿ: ತೋಟಗಾರಿಕಾ ಇಲಾಖೆ, ತೋಟಗಾರಿಕಾ ಉಪನಿದೇಶಕರ ಕಛೇರಿ, ಜಿ.ಪಂ ಉತ್ತರ ಕನ್ನಡ ಇವರು 2019-20 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಲಭ್ಯವಿರುವ ಸಹಾಯಧನದ ಪ್ರಯೋಜನ ಪಡೆದುಕೊಳ್ಳುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೋಟಗಾರಿಕ ಬೆಳೆಗಾರರ ಅನುಮೊದಿತ ಕಂಪನಿ ಮತ್ತು ಅನುಮೋದಿತ ಡೀಲರ್‍ಗಳಿಂದ ಮಾರ್ಗಸೂಚಿ ಅನುಸಾರ ನಿಗದಿತ ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡಲ್ಲಿ ಮಾರ್ಗಸೂಚಿ ಪ್ರಕಾರ 90% ಸಹಾಯಧನವನ್ನು ವಿತರಿಸುವ ಕಾರ್ಯಕ್ರಮವಿದ್ದು, ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ
ಪಂಗಡದ ತೋಟಗಾರಿಕಾ ಬೆಳೆಗಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಛೇರಿಯನ್ನು ಸಂಪರ್ಕಿಸಲು ತಿಳಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.