ಸುವಿಚಾರ

ಶೀಲಂ ಪ್ರಧಾನಂ ಪುರುಷೇ ತದ್ಯಸ್ಯೇಹ ಪ್ರಣಶ್ಯತಿ
ನ ತಸ್ಯ ಜೀವಿತೇನಾರ್ಥೋ ನ ಧನೇನ ನ ಬಂಧುಭಿಃ ||

ಪುರುಷನಾದವನಿಗೆ ಚರಿತ್ರವು ಅಥವಾ ಶೀಲವೇ ಅತ್ಯಂತ ಪ್ರಧಾನವಾದ್ದು. (ಶೀಲವಂತಿಕೆಯ ನಿಯಮವನ್ನು ಭಾರತದಲ್ಲಿ ಹೆಣ್ಣುಗಳಿಗೆ ಮಾತ್ರವೇ ಹೇರಲಾಗಿದೆ ಎಂದು ಬೀದಿರಂಪ ಮಾಡುವ ತಥಾಕಥಿತ ಫೆಮಿನಿಸ್ಟುಗಳು ಈ ಮಾತುಗಳನ್ನು ಕೇಳಬೇಕು. ಭಾರತದಲ್ಲಿ ಶೀಲವೆಂಬುದು ಮನುಷ್ಯಮಾತ್ರನಾದವನಿಗೆ ಅತ್ಯಂತ ಮುಖ್ಯವೆಂದು ಹೇಳಲಾಗಿದೆ. ಸ್ತ್ರೀಗೆ ಮಾತ್ರವೇ ಸೀಮಿತವಾದ ಚಾಸ್ಟಿಟಿ ಎನ್ನುವ ವಿಚಾರವನ್ನು ಭಾರತವು ಹೇಳಿಲ್ಲ) ಶೀಲವು ಇಲ್ಲದವನ ಜೀವನಕ್ಕೆ ಯಾವುದೇ ಅರ್ಥವೂ ಇಲ್ಲ. ಹಣವಿದ್ದೂ, ಬಂಧುಗಳಿದ್ದೂ ಶೀಲವಿಲ್ಲದಿದ್ದರೆ ಅದಕ್ಕೆ ಅರ್ಥವೇ ಇರಲಾರದು.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.