ಸಭಾಧ್ಯಕ್ಷ ಕಾಗೇರಿ ಪ್ರಯತ್ನ: ಜಿಲ್ಲಾ ಮುಖ್ಯ ರಸ್ತೆ ನವೀಕರಣಕ್ಕೆ 2.59 ಕೋಟಿ ರೂ ಮಂಜೂರಿ


ಶಿರಸಿ: 2019-2020ನೇ ಸಾಲಿನ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃಧ್ದಿ ನಿಧಿ, ಜಿಲ್ಲಾ ಮುಖ್ಯರಸ್ತೆಗಳ ನವೀಕರಣ ಯೋಜನೆಯಡಿಯಲ್ಲಿ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಮುಖ್ಯರಸ್ತೆಗಳ ನವೀಕರಣಕ್ಕೆ 2.59 ಕೋಟಿ ರೂ.ಗಳು, ಹಾಗೂ 2019-20ನೇ ಸಾಲಿನ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕಾಲೋನಿಯ ಸುಧಾರಣೆಗೆ 2.74 ಕೋಟಿ ರೂ.ಗಳು ಹಾಗೂ ಶಿರಸಿ ಸಿದ್ದಾಪುರ ತಾಲೂಕಿಗೆ ನಗರಾಭಿವೃದ್ಧಿ ಇಲಾಖೆಯಡಿ ಎಸ್.ಎಫ್.ಸಿ ವಿಶೇಷ ಅನುದಾನವಾಗಿ 3 ಕೋಟಿ ರೂ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಶಿಫಾರಸ್ಸಿನ ಮೇರೆಗೆ ಮಂಜೂರಾಗಿದೆ.

ಶಿರಸಿ ತಾಲೂಕಿನ ರಸ್ತೆ ಸುಧಾರಣೆಗೆ: ಸೋಂದಾ ಮುಖ್ಯ ರಸ್ತೆಯಿಂದ ಜೈನಮಠ ರಸ್ತೆ ಸುಧಾರಣೆ 25, ಮಳಲಿ ಓಣಿ ವಿಘ್ನೇಶ್ವರ ರಸ್ತೆ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆ 28.56, ಸೋಮಸಾಗರ ಕಕ್ಕೋಡ ದೋಣಗಾರ ಕರೂರು ಲಿಂಕ್ ನ ಆಯ್ದ ಭಾಗಗಳಲ್ಲಿ ಮರುಡಾಂಬರೀಕರಣ 30, ಹಾರುಗಾರ ಗೋಳಿ ಕಿಬ್ಬಳ್ಳಿ ರಸ್ತೆ ಸುಧಾರಣೆ 30, ಇಸಳೂರು ದಾನಂದಿ ಹೆಮ್ಮಾಡಿ ರಸ್ತೆ ಸುಧಾರಣೆಗೆ 30 ಲಕ್ಷ ರೂ ಮಂಜೂರಿಯಾಗಿದೆ.

ಸಿದ್ಧಾಪುರ ತಾಲೂಕಿನ ರಸ್ತೆ ಸುಧಾರಣೆಗೆ : ಬೇಡ್ಕಣಿ ಗುಂಜಗೋಡ ರಸ್ತೆ ಕಿ.ಮೀ 2.30 ರಿಂದ 5.20 ಹಾಗೂ 9 ರಿಂದ 10.50ರ ವರೆಗೆ ಆಯ್ದ ಭಾಗಗಳಲ್ಲಿ ಮರು ಡಾಂಬರೀಕರಣ 50, ತಾಲೂಕಿನ ಕಾನಸೂರು ತ್ಯಾಗಲಿ ಕಲ್ಕಟ್ಟೆ ಗವಿನಗುಡ್ಡ ಹಂಗಾರ ಖಂಡ ರಸ್ತೆ ಮರುಡಾಂಬರೀಕರಣ ಮಾಡಲು 35, ನಿಡಗೋಡ ಹೆಗ್ಗೋಡಮನೆ ಗುಣಸೇಕೈ ಬೆಳಸಲಗಿ ಕ್ರಾಸ್ ರಸ್ತೆ ಕಿ.ಮೀ 5.60 ರಿಂದ 6.30ರ ವರೆಗೆ ರಸ್ತೆ ಸುಧಾರಣೆ 55 ಲಕ್ಷ ರೂ ಮಂಜೂರಿಯಾಗಿದೆ.

ಪರಿಶಿಷ್ಟ ಜಾತಿ ಉಪಯೋಜನೆಯಡಿಯ ಕಾಮಗಾರಿಗೆ ಶಿರಸಿ ತಾಲೂಕಿಗೆ 166.41ಲಕ್ಷ, ಸಿದಾಪುರಕ್ಕೆ 84.02 ಲಕ್ಷ ಮಂಜೂರಿ ದೊರೆತಿದೆ. ಎಸ್.ಎಫ್.ಸಿ ಯೋಜನೆಯಡಿ ಶಿರಸಿ ನಗರಸಭೆ, ಸಿದ್ದಾಪುರ ಪಟ್ಟಣ ಪಂಚಾಯತದ ಕಾಮಗಾರಿಗಳಿಗೆ 300ಲಕ್ಷ ರೂ ಅನುದಾನ ದೊರೆತಿದೆ. ಸದರಿ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ಸಭಾಧ್ಯಕ್ಷರು ಸೂಚನೆ ನೀಡಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.