ಶಿರಸಿಯಲ್ಲಿ ಪ್ರಿಮಿಯರ್ ಪ್ರದರ್ಶನಗೊಂಡ ‘ಅಪ್ಸರಧಾರಾ’ ಮಕ್ಕಳ ಚಲನಚಿತ್ರ


ಶಿರಸಿ: ಕೊಂಕಣಿ ಭಾಷಾ ಪ್ರೇಮಿಗಳ ಸಹಕಾರದೊಂದಿಗೆ ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಪರಿಷತ್ತು (ರಿ.)ಶಿರಸಿ ಇವರ ಪ್ರಾಯೋಜಕತ್ವದಲ್ಲಿ ಬುಧವಾರ ಕೊಂಕಣಿ ಭಾಷೆಯ ಮಕ್ಕಳ ಚಲನಚಿತ್ರ `ಅಪ್ಸರಧಾರಾ’ ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಪ್ರಿಮಿಯರ್ ಪ್ರದರ್ಶನ ನಡೆಯಿತು.

ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಶ್ರೀ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ಮಹಾಸ್ವಾಮಿಗಳು ಡಾ|| ರಮೇಶಕಾಮತ ಅವರು ನಿರ್ದೇಶಿಸಿ,ನಿರ್ಮಿಸಿದ ಚಿತ್ರದ ಡಿ.ವಿ.ಡಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶಾ.ಮಂ.ಕೃಷ್ಣರಾಯರು ಉಪಸ್ಥಿತರಿದ್ದರು.

ನಿರ್ಮಾಪಕ ನಿರ್ದೇಶಕ ರಮೇಶಕಾಮತ ಈ ಚಿತ್ರದಲ್ಲಿ ಜೀವನದಲ್ಲಿ ಯಶಸ್ಸು ಪಡೆಯಲು ಸರಳ ಮಾರ್ಗವಿಲ್ಲ, ಹಣಕ್ಕಿಂತ ವಿದ್ಯೆಗೆ ಹೆಚ್ಚಿನ ಪ್ರಶಸ್ತಿ ನೀಡಬೇಕು ಹಾಗೂ ಲಿಂಗ ಬೇಧವಿಲ್ಲದೇ ಸಕಲರಿಗೂ ಶಿಕ್ಷಣ ದೊರೆಯುವಂತಾಗಬೇಕು ಎನ್ನುವ ತತ್ವ ಸಾರಲಿರುವ ಅಪ್ಸರಧಾರಾದ ಚಿತ್ರವನ್ನು ಉತ್ತರಕನ್ನಡ ಜಿಲ್ಲೆಯ ಯಾಣ, ದೇವನಳ್ಳಿ, ಅಪ್ಸರಕೊಂಡ, ಬೆಂಗಳೂರು ಹಾಗೂ ಇಜಿಪ್ತದಲ್ಲಿ ಆಗಿದೆ. ಈ ಚಿತ್ರವು ಈ ತಿಂಗಳಲ್ಲಿ ಕಲ್ಕತ್ತಾದಲ್ಲಿ ಜರುಗಲಿರುವ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‍ದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ ಎಂದರು.

ಅಪ್ಸರ ಧಾರಾದಲ್ಲಿಉತ್ತರಕನ್ನಡ ಜಿಲ್ಲೆಯ ಕೂಡ್ಲಆನಂದು ಶಾನಭಾಗ, ವಿವೇಕ ದಿವೇಕರ, ವಿಶಾಕ ಇಸಳೂರು, ಸುಧೀರ ನಾಯಕ, ಬೆಂಗ್ರೆ ಶಾಂತಾರಾಮ ದಿವೇಕರ, ತೇಲಂಗ, ಜಿಯು ಭಟ್ಟ ಹೊನ್ನಾವರ ಮುಂತಾಗಿ, ದಿವೇಕರ ಕುಟುಂಬದ ಸದಸ್ಯರು, ದೇವನಳ್ಳಿ ನಾಗರಿಕರು, ತಾರಾಗಣದಲ್ಲಿದ್ದಾರೆ. ವಾಲ್ಟರ್‍ಡಿ’ಕೋಸ್ತಾ ಮುಂತಾದ ಕಲಾವಿದರು ಧ್ವನಿಯಾಗಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.