ಮಾಲಿನ್ಯ ಮುಕ್ತ ಭಾರತ ಅಭಿಯಾನ: ನ.9ಕ್ಕೆ ಸೈಕಲ್ ಜಾಥಾ

ಶಿರಸಿ: ಮಾಲಿನ್ಯ ಮುಕ್ತ ಭಾರತ ಅಭಿಯಾನದ ಪ್ರಯುಕ್ತ ವಾಹನದ ಬಳಕೆ ಕಡಿಮೆ ಮಾಡಿ ಪರಿಸರ ಮಾಲಿನ್ಯ ತಡೆಯುವ ಜಾಗೃತಿಗೆ ಸೈಕಲ್ ಜಾಥಾ ನಗರದಲ್ಲಿ ನ.9ರಂದು ಆಯೋಜಿಸಲಾಗಿದೆ.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಲಿನ್ಯ ಮುಕ್ತ ಭಾರತ ಅಭಿಯಾನ ಪ್ರಮುಖ ಅಜಿತ್ ನಾಡಿಗ್ ಈ ಕುರಿತು ವಿವರಣೆ ನೀಡಿದರು. ಲಯನ್ಸ್ ಕ್ಲಬ್, ರೋಟರಿಕ್ಲಬ್, ನಗರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಮೋಘ ಈ ಮೋಟರ್ಸ್ ಹಾಗೂ ಸಾಯಿ ಸೈಕಲ್ಸ್ ಸಹಯೋಗದಲ್ಲಿ ಜಾತಾ ಸಂಘಟಿಸಲಾಗಿದೆ ಎಂದರು. ಐದು ದಶಕಗಳ ಕಾಲ ಸೈಕಲ್ ಬಳಕೆ ಮಾಡುತ್ತಿರುವ ಪ್ರಕಾಶ ಉಡಪೀಕರ್ ಬೆಳಗ್ಗೆ 9:30ಕ್ಕೆ ಚಾಲನೆ ನೀಡಲಿದ್ದಾರೆ. ವಿಕಾಸಾಶ್ರಮ ಮೈದಾನದಿಂದ ಜಾಥಾ ಆರಂಭಗೊಳ್ಳಲಿದೆ. ವಿದ್ಯಾರ್ತಿಗಳು ಸೇರಿದಂತೆ 700 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಸೈಕಲ್ ಬಳಸಿದರೆ ಮಾಲಿನ್ಯ ತಪ್ಪುತ್ತದೆ ಆರೋಗ್ಯಕ್ಕೂ ಅನುಕೂಲ. ಹಣವೂ ಉಳಿಯಲಿದೆ. ಪ್ರತೀ ತಿಂಗಳ ಮೊದಲ ಶನಿವಾರ ಸೈಕಲ್ ಬಳಸುವ ವ್ಯಕ್ತಿಯನ್ನು ಗೌರವಿಸಲು ನಿರ್ಧರಿಸಿದ್ದೇವೆ, ಬಾಗಲಕೋಟ, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯಲ್ಲೂ ಸೈಕಲ್ ಜಾಥಾ ಸಂಘಟಿಸವ ಕಾರ್ಯ ನಡೆಯುತ್ತಿದೆ ಎಂದರು.
ಅಭಿಯಾನದ ತಾಲೂಕು ಸಂಚಾಲಕ ಮನೋಜ್ ಜೋಗಳೇಕರ್, ದತ್ತಾತ್ರೇಯ ದೇವಸ್ಥಳಿ, ವಿನೋದ ಸಾವಂತ, ಪ್ರವೀಣ ಲೋಖಂಡೆ, ರಾಜಶೇಖರ ಉಪಸ್ಥಿತರಿದ್ದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.