ತಾರಮಕ್ಕಿ ಶಾಲೆ ದುರಸ್ತಿಗೆ 10 ಲಕ್ಷ ರೂ ಬಿಡುಗಡೆ


ಗೋಕರ್ಣ: ರಾಜ್ಯ ಸಭಾ ಸದಸ್ಯ ಜಿ.ಸಿ. ಚಂದ್ರಶೇಖರವರು ಸಂಸದರ ಅನುದಾನದಡಿ ಇಲ್ಲಿನ ತಾರಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ರಿಪೇರಿಗಾಗಿ 10 ಲಕ್ಷ ರೂಪಾಯಿಯಗಳನ್ನು ಬಿಡುಗಡೆ ಗೊಳಿಸಿದ್ದಾರೆ.

ಹಲವು ವರ್ಷಗಳ ಹಿಂದೆ ಪರಿವರ್ತಾನ ಟ್ರಸ್ಟ ಸಂಸ್ಥೆಯು ಶಾಲೆಯನ್ನು ದತ್ತು ತೆಗೆದುಕೊಂಡಿದ್ದು, ಹಲವು ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಸಂಸ್ಥೆಯವರು ನ. 4 ರಂದು ಶಾಲಾ ದುರಸ್ತಿಗಾಗಿ ಮನವಿ ಮಾಡಿದ್ದರು. ತಕ್ಷಣ ಸ್ಪಂದಿಸಿದ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ತಾರಮಕ್ಕಿ ಶಾಲೆ ಮೇಲ್ಛಾವಣಿ ರಿಪೇರಿಗೆ ಸಂಸದರ ನಿಧಿಯಿಂದ 10ಲಕ್ಷವನ್ನು ಬಿಡುಗಡೆ ಮಾಡಿ ಶೀಘ್ರವೇ ರಿಪೇರಿ ಕಾರ್ಯಕೈಗೊಳ್ಳುವಂತೆ ಉತ್ತರ ಕನ್ನಡ ಜಿಲ್ಲೆಯ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಆದೇಶಿಸಿದ್ದಾರೆ. ತ್ವರಿತವಾಗಿ ಸ್ಪಂದಿಸಿದ ರಾಜ್ಯ ಸಭಾ ಸದಸ್ಯ ಜಿ.ಸಿ. ಚಂದ್ರಶೇಖರವರಿಗೆ ಪರಿವರ್ತನ ಸಂಸ್ಥೆಯ ಅಧ್ಯಕ್ಷ ಪ್ರಮೋದ ಪೈ ಮತ್ತು ಎಲ್ಲಾ ಸದಸ್ಯರು ಅಭಿನಂದಿಸಿದ್ದಾರೆ.

ಈಗಾಗಲೇ ಸಂಸ್ಥೆ ಶಾಲೆಯಲ್ಲಿ 8 ಲಕ್ಷ ವೆಚ್ಚದಲ್ಲಿ ಡೆಸ್ಕ್ ಮತ್ತು ಬೆಂಚ್, 11 ಕಂಪ್ಯೂಟರ, ಸೇರಿದಂತೆ ಅತ್ಯಾಧುನಿಕ ಕಲಿಕಾ ಪಾಠೋಪಕರಣವನ್ನು ನೀಡಿದ್ದು, ಬೇಸಿಗೆಯಲ್ಲಿ ಮಕ್ಕಳಿಗೆ ಪರಿವರ್ತನಾ ಶಿಬಿರದ ಮೂಲಕ ಪಠ್ಯತೇರ ಚಟುವಟಿಕೆಯನ್ನು ನೀಡುತ್ತಿರುವುದು ಇಲ್ಲಿ ಸ್ಮರಿಸಬಹುದಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.