ಚಿತ್ರಕಲಾ ಸ್ಪರ್ಧೆ: ತೇಜಸ್ ಪ್ರಥಮ

ಕುಮಟಾ: ಭಾರತೀಯ ಜೀವ ವಿಮಾ ನಿಗಮ ನಡೆಸಿದ ಕುಮಟಾ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪಟ್ಟಣದ ಹಳೇ ಹೆರವಟ್ಟಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ತೇಜಸ್ ಮಂಜುನಾಥ ನಾಯ್ಕ ಪ್ರಥಮ ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾನೆ. ಈತನು ಹೆರವಟ್ಟಾದ ಮಂಜುನಾಥ ನಾಯ್ಕ ಮತ್ತು ವಿಜಯಾ ನಾಯ್ಕ ದಂಪತಿಯ ಪುತ್ರನಾಗಿದ್ದು, ಈತನ ಸಾಧನೆಗೆ ಶಾಲೆಯ ಶಿಕ್ಷಕ ವೃಂದ, ಎಸ್‍ಡಿಎಂಸಿ ಸದಸ್ಯರು, ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

Categories: ಚಿತ್ರ ಸುದ್ದಿ

Leave A Reply

Your email address will not be published.