ಕ.ರ.ವೇ- ಪ್ರವೀಣ ಶೆಟ್ಟಿ ಬಣದಿಂದ ತಲಗೇರಿ ಶಾಲೆಗೆ ಕುಕ್ಕರ್ ವಿತರಣೆ

ಗೋಕರ್ಣ: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಲಗೇರಿ ಸರ್ಕಾರಿ ಶಾಲೆ ಮತ್ತು ಸಾಣಿಕಟ್ಟಾ ಅಂಗನವಾಡಿಗೆ ಅಗತ್ಯವಿರುವ ಕುಕ್ಕರನ್ನು ದೇಣಿಗೆಯಾಗಿ ನೀಡಲಾಯಿತು.

ನಂತರ ಸಿಹಿ ವಿತರಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಕ.ರ.ವೇ ಅಧ್ಯಕ್ಷ ರವಿ ಹೊಸ್ಕಟ್ಟಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ ಶೆಟ್ಟಿ, ತಾಲೂಕಾ ಅಧ್ಯಕ್ಷ ನಾಗರಾಜ ಶೇಟ್, ಸದಸ್ಯರಾದ ನಾಗರಾಜ ಆಚಾರ್ಯ, ವಾಸು ಅಡ್ಪೇಕರ, ತಿಪ್ಪಯ್ಯ ಗುನಗಾ, ಹರೀಶ ಸಾಣಿಕಟ್ಟಾ, ಬಾಲು ತೊರೆಗಜನಿ, ನರೇಂದ್ರ ನಾಯಕ, ಜಟ್ಟಿ ಹರಿಕಂತ್ರ, ಚಂದ್ರು ಬಂಕಿಕೊಡ್ಲಾ, ರಮೇಶ ಬಂಗ್ಲೆಗುಡ್ಡೆ, ಬಾಲು ಮೂಡಂಗಿ, ಅಸೋಕ ಹೊಸ್ಕಟ್ಟಾ, ನಾಗರಾಜ ಹರಿಕಂತ್ರ ಕಮಲಾಕರ ಗೌಡ, ವಿಜಯ ಹೊಸ್ಕಟ್ಟ ಮತ್ತು ಶಾಲಾ ಶಿಕ್ಷವೃಂದವರು ಉಪಸ್ಥಿತರಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.