NSS ಶಿಬಿರದಲ್ಲಿ ಕಲಿತ ಪಾಠಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು: ಪ್ರದೀಪ ನಾಯಕ


ಗೋಕರ್ಣ: ವಿದ್ಯಾರ್ಥಿಗಳು NSS ಶಿಬಿರದಲ್ಲಿ ಕಲಿತುಕೊಂಡ ಅಂಶಗಳನ್ನು ಬದುಕಿನಲ್ಲಿಯೂ ಪಾಲಿಸಿಕೊಂಡು ಉತ್ತಮ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತದ ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ ಹೇಳಿದರು.

ಅವರು ಇಲ್ಲಿನ ಭದ್ರಕಾಳಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್.ನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ವಿದ್ಯಾಭ್ಯಾಸದ ಜೊತೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಂಡು ಶಿಸ್ತು, ಪರಸ್ಪರ ಸಹಕಾರ ಮನೋಭಾವದೊಂದಿಗೆ ಸಾಮಾಜಕ್ಕೆ ಮಾದರಿ ವ್ಯಕ್ತಿಯಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೆನರಾ ಶಿಕ್ಷಣ ಪ್ರಸಾರಕ ಮಂಡಳದ ಗೌರವ ಕಾರ್ಯದರ್ಶಿ ಜಿ.ಎನ್.ನಾಯಕ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಸಿಕ್ಕ ಈ ಸದಾವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ಎಸ್.ಸಿ.ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಯೋಜನಾಧಿಕಾರಿ ರಾಮಮೂರ್ತಿ ನಾಯಕ ಸಾಪ್ತಾಹಿಕ ಶಿಬಿರದ ಸಂಕ್ಷಿಪ್ತ ವರದಿ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಎನ್.ಎಸ್.ಲಮಾಣಿ, ಸಂದೀಪ ನಾಯಕ, ಸತ್ಯನಾರಾಯಣ ಎನ್.ಎಮ್, ಪಲ್ಲವಿ ಹೆಗಡೆ ಉಪಸ್ಥಿತರಿದ್ದರು. ರಾಜಶೇಖರ ಬಾಗೇವಾಡಿ ನಿರೂಪಿಸಿದರು. ಕುಮಾರಿ ಸಾವಿತ್ರಿ ಗೌಡ ವಂದಿಸಿದರು. ಶಿಬಿರಾರ್ಥಿಗಳು ಶಿಬಿರದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಏಳು ದಿನಗಳ ಕಾಲ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು ಕಲಿತ ಶಿಸ್ತು – ಸಮಯಪಾಲನೆ – ಶ್ರಮದಾನ ಸೇವಾ ಮನೋಭಾವ, ವಿವಿಧ ಉಪನ್ಯಾಸ, ಮನರಂಜನಾ ಕಾರ್ಯಕ್ರಮಗಳೇ ಮೊದಲಾದ ಅಂಶಗಳು ಶಿಬಿರಾರ್ಥಿಗಳ ಸ್ವಾನುಭವ ಕಥನದಲ್ಲಿ ವ್ಯಕ್ತಗೊಂಡು ಶಿಬಿರವು ಯಶಸ್ವಿಯಾಯಿತು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.