ನಿಲ್ಲಿಸಿಟ್ಟ ಟಾಟಾ ಏಸ್‍ಗೆ ಏಕಾಏಕಿ ಬೆಂಕಿ.!


ಗೋಕರ್ಣ: ನಿಲ್ಲಿಸಿ ಹೋಗಿದ್ದ ವಾಹನಕ್ಕೆ ಬೆಂಕಿ ಹೊತ್ತಿ ಉರಿದ ಘಟನೆ ಇಲ್ಲಿನ ಮೀನು ಮಾರುಕಟ್ಟೆ ಬಳಿ ನಡೆದಿದೆ. ದೇವು ಗೌಡ ಎಂಬುವವರ ಟಾಟಾ ಏಸ್ ವಾಹನವಾಗಿದ್ದು, ಬುಧವಾರ ಬೆಳಗಿನ ಜಾವ ಘಟನೆ ನಡೆದಿರಬಹುದು ಎನ್ನಲಾಗಿದೆ.

ಪ್ರತಿ ನಿತ್ಯ ರಾತ್ರಿ ತಮ್ಮ ವಾಹನವನ್ನು ಇಲ್ಲಿಯೇ ನಿಲ್ಲಿಸಿ ಮನೆಗೆ ಹೋಗುತ್ತಿದ್ದು, ಅದರಂತೆ ಮಂಗಳವಾರ ಸಂಜೆ ವಾಹ ಇಟ್ಟು ಹೋಗಿದ್ದು ಮುಂಜಾನೆ ನೋಡುವಷ್ಟರಲ್ಲಿ ಬೆಂಕಿ ಹೊತ್ತಿ ಕರಕಲಾಗಿದೆ. ಆಕಸ್ಮಿಕ ಬೆಂಕಿ ಬಿದ್ದಿದೆಯೋ ಅಥವಾ ಕಿಡಿಗೇಡಿಗಳ ಕೃತ್ಯವೂ ಪೊಲೀಸ ತನಿಖೆಯಿಂದ ತಿಳಯಬೇಕಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.