ಧಾರಾಕಾರ ಮಳೆಗೆ ಮನೆಗೆ ನುಗ್ಗಿದ ನೀರು: ಜನಜೀವನ ಅಸ್ತವ್ಯಸ್ತ

ಮುಂಡಗೋಡ: ತಾಲೂಕಿನಾದ್ಯಂತ ಮೂರ್ನಾಲ್ಕು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ಸುರಿದ ಮಳೆಯಿಂದಾಗಿ ಮೂರು ಮನೆಗಳ ಒಳಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಓಣಿಕೇರಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಓಣಿಕೇರಿ ಗ್ರಾಮದ ಸದಾನಂದ ಅಕ್ಕಸಾಲಿ, ಮಾಂತೇಶ ಹುಡೇದ, ನಾಗವ್ವಾ ಹುಡೇದ ಎಂಬುವರ ಮನೆಗಳ ಕೋಣೆಗಳ ಒಳಗೆ ಮಳೆ ನೀರಿನ ಜತೆ ಚರಂಡಿ ನೀರು ಕೂಡ ನುಗ್ಗಿದೆ. ಇದರಿಂದ ಮನೆಯಲ್ಲಿದ್ದ ದವಸ ಧಾನ್ಯ ಇನ್ನಿತರ ವಸ್ತುಗಳು ನೀರಿನಲ್ಲಿ ತೇಲಿಕೊಂಡು ಹೋಗಿವೆ. ಇದಲ್ಲದೇ ಗ್ರಾಮದ ಬಸವಣ್ಣ ದೇವಸ್ಥಾನದ ಆವರಣದೊಳಗೆ ನೀರು ನುಗ್ಗಿದೆ. ಕಳೆದ ಎರಡು ತಿಂಗಳ ಹಿಂದಷ್ಟೇ ಆದ ವರುಣನ ಆರ್ಭಟದಿಂದ ಚೇತರಿಸಿಕೊಳ್ಳುತ್ತಿರುವ ಜನರಲ್ಲಿ ಈಗ ಮತ್ತೆ ಭೀತಿ ಆವರಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.