ಆರೋಗ್ಯಯುತ ಜೀವನಕ್ಕೆ ಕ್ರೀಡೆ ಮುಖ್ಯ: ಡಾ.ಜಿ.ಎಂ.ಹೆಗಡೆ

ಶಿರಸಿ: ನಮ್ಮ ದೇಶ ಆಟದಲ್ಲಿ ತೀರಾ ಹಿಂದಿತ್ತು. ಈಗ ಬದಲಾವಣೆ ಆಗುತ್ತಿದೆ. ಆರೋಗ್ಯವಾದ ಜೀವನ ಬೇಕೆಂದರೆ ಆಟ ಮುಖ್ಯ ಎಂದು ಸ್ತ್ರೀರೋಗ ತಜ್ಞ ಡಾ.ಜಿ.ಎಂ.ಹೆಗಡೆ ಅಭಿಪ್ರಾಯಪಟ್ಟರು.

ಅವರು ಶನಿವಾರ ಇಲ್ಲಿನ ಕೋರ್ಟ ರಸ್ತೆಯಲ್ಲಿರುವ ಸ್ಪೋರ್ಟ್ಸ್, ಪಾಸಟೈಮ್ & ಕಲ್ಚರಲ್ ಕ್ಲಬ್ನಲ್ಲಿ 5 ನೇ ಡಾ.ಎಲ್.ಎಚ್.ಪೈ ಮೆಮೋರಿಯಲ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್-2019 ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಡ್ಮಿಂಟನ್ ಪಂದ್ಯಾವಳಿ 5 ನೇ ವರ್ಷ ಉತ್ತಮವಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇದು ನಮ್ಮ ಹಿರಿಯರಿಗೆ ಸಲ್ಲಿಸುವ ಗೌರವ. ಅದರ ಜೊತೆಗೆ ಜನರಲ್ಲಿ ಆಟದ ಕಡೆ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅದರಂತೆ ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಕಲ್ಪನೆಗೆ 5 ವರ್ಷಗಳ ಹಿಂದೆಯೇ ಚಾಲನೆ ನೀಡಿದ್ದಾರೆ ಎಂದರು.

ಡಾ.ಪೈ ಉತ್ತಮ ಆಟಗಾರರಾಗಿದ್ದರೂ ಜೀವನದಲ್ಲಿ ಉತ್ತಮ ಆಟಗಾರರ ಕಲ್ಪನೆಯಲ್ಲಿ ಬದುಕುತ್ತಿದ್ದವರು. ಕಷ್ಟ, ಸುಖ ಕಂಡ ವ್ಯಕ್ತಿ. ಅವರಿಂದ ಶಿರಸಿಯಲ್ಲಿ ಬ್ಯಾಡ್ಮಿಂಟನ್ ಆಟಕ್ಕೆ ಕಲ್ಪನೆಯ ಸೌಲಭ್ಯ ದೊರೆತು ಬಂದಿದೆ. ಈ ಟೂರ್ನಮೆಂಟ್ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ನಡೆಸಿ ರಾಜ್ಯಮಟ್ಟದ ಆಟವಾಗಬೇಕು. ನಮ್ಮೆಲ್ಲರ ಸಹಕಾರ ಸದಾ ಇದೆ. ರಾಜ್ಯಮಟ್ಟದ ಕ್ರೀಡಾ ವ್ಯವಸ್ಥೆ ಮಾಡೋಣ ಎಂದರು.

ಬ್ಯಾಡ್ಮಿಂಟನ್ ಆಟಗಾರ & ಕೋಚ್ ಸದಾನಂದ ಶೆಟ್ಟಿ ಮಾತನಾಡಿ, ನಾನೊಬ್ಬ ಆಟಗಾರನಾಗಿ ಈ ವೇದಿಕೆಯಲ್ಲಿ ಪಾಲ್ಗೊಳ್ಳುವಂತೆ ಗುರುತಿಸಿದ್ದು ಸಂತೋಷದ ಸಂಗತಿ. ಇದೇ ರೀತಿ ಎಲ್ಲ ಆಟಗಾರರೂ ನಿಮ್ಮನ್ನು ನಿಮ್ಮ ಆಟದಿಂದ ಗುರುತಿಸುವಂತೆ ಮುನ್ನಡೆಯಿರಿ. ನಿಮ್ಮ ಸಾಧನೆ ರಾಷ್ಟ್ರಮಟ್ಟಕ್ಕೂ ತಲುಪುವಂತಾಗಬೇಕು, ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕ್ಲಬ್ನ ಅಧ್ಯಕ್ಷ ಅನಿಲ್ ಭಟ್, ಕ್ಲಬ್ನ ಖಜಾಂಚಿ ಉದಯ ಸ್ವಾದಿ, ಸದಸ್ಯರಾದ ನಿತಿನ್ ಕಾಸರಕೊಡ, ದಿ.ಡಾ.ಎಲ್.ಎಚ್.ಪೈ ಪತ್ನಿ ಕರುಣಾ ಪೈ ಹಾಗೂ ಇತರರು ಉಪಸ್ಥಿತರಿದ್ದರು

Categories: ಚಿತ್ರ ಸುದ್ದಿ

Leave A Reply

Your email address will not be published.