ಸುವಿಚಾರ

ಯೇನ ಯತ್ರೈವ ಭೋಕ್ತವ್ಯಂ ಸುಖಂ ವಾ ದುಃಖಮೇವ ವಾ
ಸ ತತ್ರ ಬದ್ಧ್ವಾ ರಜ್ಜ್ವೇವ ಬಲಾದ್ದೈವೇನ ನೀಯತೇ ||

ಬದುಕನ್ನು ನಿರ್ಧರಿಸುವ ಪ್ರಬಲವಾದ ಶಕ್ತಿಯೆಂದರೆ ಅದು ಪೂರ್ವಕೃತಕರ್ಮಗಳಿಗನುಸಾರವಾಗಿ ವರ್ತಿಸುವ ದೈವ ಅಥವಾ ಅದೃಷ್ಟ. ಎಲ್ಲೋ
ಹುಟ್ಟಿ ಏನೋ ಓದಿ ಹೇಗೋ ಇದ್ದವರು ಇನ್ನೆಲ್ಲೋ ಹೋಗಿ ಬದುಕನ್ನಾರಂಭಿಸುವಂತೆ ಮಾಡುವುದೇ ದೈವ. ಅದು ಸುಖವಾಗಲಿ ನೋವಾಗಲಿ,
ಯಾರ್ಯಾರಿಂದ ಎಲ್ಲಿಲ್ಲಿ ಎಷ್ಟೆಷ್ಟು ಅನುಭವಿಸಲ್ಪಡಬೇಕೋ ಅಷ್ಟಷ್ಟನ್ನು ಅಲ್ಲಲ್ಲಿ ಅನುಭವಿಸುವಂತೆ ಮಾಡುತ್ತದೆ ಇದು. ಹಗ್ಗದಿಂದ ಕಟ್ಟಿ
ಎಳಕೊಂಡು ಹೋಗಿ ಆಯಾ ಜಾಗಕ್ಕೆ ಕಟ್ಟಿ ಹಾಕುತ್ತದೆ! ಅದಕ್ಕೇ ತಾನೇ, ಅನ್ನ ಮತ್ತು ನೀರಿನ ಋಣ ಇದ್ದಲ್ಲಿಯೇ ಬದುಕು ಕಟ್ಟಿಕೊಳ್ಳುತ್ತದೆ
ಅನ್ನುವ ಹಿರಿಯರ ಮಾತಿದ್ದುದು.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.