ಹಳಗಾ ಬಾಲಕಿಯರ ವಸತಿ ನಿಲಯದಲ್ಲಿ ರೋಟರಿ ಸಂಸ್ಥೆಯ ಅನ್ನಸೇವಾ ಸಂಕಲ್ಪ

 

ಕಾರವಾರ: ಇಲ್ಲಿನ ರೋಟರಿ ಸಂಸ್ಥೆ ವತಿಯಿಂದ ಹಳಗಾದ ಮೊಡರ್ನ್ ಹೈಸ್ಕೂಲ್, ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ರೋಟರಿ ಅನ್ನಸೇವಾ ಸಂಕಲ್ಪ ಕಾರ್ಯಕ್ರಮದಡಿಯಲ್ಲಿ 25 ಕೆ.ಜಿ.ಯ ಐದು ಅಕ್ಕಿ ಚೀಲಗಳು, 10 ಕೇ.ಜಿ. ಬೆಲ್ಲ, 12 ಕೇ.ಜಿ. ತೊಗರಿ ಬೆಳೆ ಇವುಗಳನ್ನು ವಿತರಿಸಿದರು.

ರೋಟರಿ ಅಧ್ಯಕ್ಷ ರೋ. ನಾಗರಾಜ ಜೋಶಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿ ಮುಂದೆ ಬರಬೇಕು ಹಾಗೂ ಸಮಾಜದ ಏಳಿಗೆಗಾಗಿ ಕೈಜೋಡಿಸಬೇಕು ಎಂದರು. ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಸುರೇಶ ಪೈ ರವರು ರೋಟರಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸುತ್ತ ಅನ್ನದಾನವು ಸರ್ವಶ್ರೇಷ್ಟದಾನ, ಸಂಸ್ಥೆಯಿಂದ ಇನ್ನೂ ಅನೇಕ ಇಂತಹ ವಸತಿ ನಿಲಯಗಳಿಗೆ ಇವರಿಂದ ಈ ಸೌಲಭ್ಯ ಸಿಗುವಂತಾಗಲಿ ಎಂದು ಎಲ್ಲರನ್ನೂ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಶಾಲೆಯ ಕಮೀಟಿ ಸದಸ್ಯ ವಸಂತ ಹಳಗೇಕರ, ರೋಟರಿ ಸಂಸ್ಥೆಯ ರೋ. ಅಮರನಾಥ ಶೆಟ್ಟಿ, ರೋ. ಕೃಷ್ಣಾ ಕೆಳಸ್ಕರ, ರೋ. ಪ್ರಸನ್ನ ತೆಂಡೂಲ್ಕರ, ರೋ. ಡಾ. ಸಮೀರಕುಮಾರ ನಾಯಕ, ರೋ. ಪಾಂಡುರಂಗ ಎಸ್. ನಾಯ್ಕ, ಪಾಲ್ಗೊಂಡಿದ್ದರು.

ಶಾಲೆಯ ಮುಖ್ಯಾಧ್ಯಾಪಕ ಮಂಜಪ್ಪಾ ಸ್ವಾಗತಿಸಿದರು. ರೋಟರಿ ಸಮುದಾಯ ಸೇವಾ ನಿರ್ದಶಕರ ರೋ. ಮಾರುತಿ ಕಾಮತ, ಅನ್ನಸೇವಾ ಸಂಕಲ್ಪದ ಮಹತ್ವ ಹಾಗೂ ರೋಟರಿ ಯಾವ ಯಾವ ಶಾಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎನ್ನುವುದನ್ನು ವಿವರಿಸಿದರು. ಶಾಲೆಯ ಅಧ್ಯಾಪಕ ಹರೀಶ ನಾಯಕ ವಂದಿಸಿದರು. ಶಾಲೆಯ ಅಧ್ಯಾಪಕಿ ದೀಪಾ ಶೇಟ ನಿರೂಪಿಸಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.