ಯಕ್ಷಗಾನದ ಏಳ್ಗೆಗೆ ಮನಃಪೂರ್ವಕವಾಗಿ ಕೆಲಸ ಮಾಡುವೆ: ಪ್ರೊ. ಎಂ.ಎ.ಹೆಗಡೆ


ಶಿರಸಿ: ಅಕಾಡೆಮಿಯ ಮೂಲಕ ಯಕ್ಷಗಾನದ ಏಳ್ಗೆಗೆ ಮನಃಪೂರ್ವಕವಾಗಿ ಕೆಲಸ ಮಾಡುವದಾಗಿ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ, ಯಕ್ಷಗಾನ ಪ್ರಸಿದ್ಧ ವಿದ್ವಾಂಸ, ಕವಿ ಪ್ರೊ. ಎಂ.ಎ.ಹೆಗಡೆ ತಿಳಿಸಿದರು.

ಅವರು ಕರ್ನಾಟಕ ಸರಕಾರವು ಯಕ್ಷಗಾನ ಅಕಾಡೆಮಿಗೆ ನೂತನ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಿದ ವೇಳೆ ಹರ್ಷ ವ್ಯಕ್ತಪಡಿಸಿದ ಅವರು, ಅಕಾಡೆಮಿಗೆ ನನ್ನಬಳಿ ವಿಶ್ವಾಸ ಇರಿಸಿ ಅಧ್ಯಕ್ಷಸ್ಥಾನ ನೀಡಿದ್ದು ಸಹಜವಾಗಿ ಖುಷಿಯಾಗಿದೆ. ಬಾಕಿ ಉಳಿದ ಹಾಗೂ ಯೋಜಿಸಿಕೊಂಡ ಕೆಲಸಗಳನ್ನು ಪುನಃ ಮುಂದುವರಿಸಲು ಅನುಕೂಲ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಕಾಡೆಮಿಯ ನೂತನ ಸದಸ್ಯರನ್ನಾಗಿ ಯಕ್ಷಗಾನ ಕಲಾವಿದೆ ನಿರ್ಮಲಾ ಹೆಗಡೆ ಗೋಳಿಕೊಪ್ಪ, ಅರ್ಥದಾರಿ ದಿವಾಕರ ಹೆಗಡೆ ಕೆರೆಹೊಂಡ, ಜಿ.ಎಸ್.ಭಟ್ಟ ಮೈಸೂರು ಸೇರಿದಂತೆ ಹನ್ನೊಂದು ಕಲಾವಿದರನ್ನು ಸರಕಾರ ನೇಮಕಗೊಳಿಸಿದೆ.

ಕಳೆದ ಎರಡು ವರ್ಷಗಳ ಹಿಂದೆ ನೇಮಕಗೊಂಡಿದ್ದ ನೂತನ ಯಕ್ಷಗಾನ ಅಕಾಡೆಮಿಗೆ ಕೇವಲ ಒಂದು ವರ್ಷದ ಎರಡು ತಿಂಗಳುಗಳ ಕಾಲ ಅಧ್ಯಕ್ಷರಾಗಿದ್ದ ಎಂ.ಎ.ಹೆಗಡೆ ಅವರನ್ನು ಇದೀಗ ಸರಕಾರ ಪುನರ್ ನೇಮಕಗೊಳಿಸಿದೆ.

ಇನ್ನಷ್ಟು ಸದಸ್ಯರು: ನಾಟಕ ಅಕಾಡೆಮಿಗೆ ಕೆ.ಆರ್.ಪ್ರಕಾಶ, ಕೊಂಕಣಿ ಸಾಹಿತ್ಯ ಅಕಾಡೆಮಿಗೆ ವಸಂತ ಬಾಂದೇಕರ್, ಬಯಲಾಟ ಅಕಾಡೆಮಿಗೆ ಹಳಿಯಾಳದ ಬಿರಾದಾರ್ ಆಯ್ಕೆ ಆಗಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.