ಚುನಾವಣೆಗೆ ರವೀಂದ್ರ ನಾಯ್ಕ ನಿಲ್ಲಲಿ: ಅರಣ್ಯ ಅತಿಕ್ರಮಣದಾರರ ಒತ್ತಾಯ

ಮುಂಡಗೋಡ: ಚುನಾವಣೆಗೆ ಸ್ಪರ್ಧೆ ಮಾಡಿ ಅತಿಕ್ರಮಣದಾರರು ಬೆಂಬಲಿಸುತ್ತೇವೆ. ಅತಿಕ್ರಮಣದಾರರ ಶಕ್ತಿಯನ್ನು ತೋರಿಸುತ್ತೇವೆ. ಅತಿಕ್ರಮಣದಾರರ ಒಳಿತಿಗಾಗಿ ಸಂಘಟನಾತ್ಮಕ ಹೋರಾಟ ಮಾಡುವ ಎಂಬ ಧ್ವನಿ ಅತಿಕ್ರಮಣದಾರರಿಂದ ಕೇಳಿ ಬಂದವು.

ಅ. 14 ರಂದು ಮುಂಡಗೋಡ ತಾಲೂಕು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ವತಿಯಿಂದ ಬೃಹತ್ ರ‍್ಯಾಲಿಯ ಮುನ್ನ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅತಿಕ್ರಮಣ ಹೋರಾಟಗಾರರ ಮುಖಂಡರು ವೇದಿಕೆ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕರಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯಾಗಲು ಒತ್ತಾಯಿಸಿದ ಪ್ರಸಂಗ ಕಂಡು ಬಂದವು.

ಕಳೆದ ವಿಧಾನಸಭಾಚುನಾವಣೆಯಲ್ಲಿಅತಿಕ್ರಮಣದಾರರುಒಟ್ಟಾತ್ರಯದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳದಿದ್ದರಿಂದ ನಿಮಗೆ ಸೋಲುಂಟಾಯಿತು. ಆದರೆ ಈ ಸಾರಿಯ ಚುನಾವಣೆಯಲ್ಲಿ ಬದಲಾದ ವಾತಾವರಣ ಸೃಷ್ಟನೆಗೊಂಡಿದ್ದು ಅತಿಕ್ರಮಣದಾರರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯಾಗಿ ಚುನಾವಣೆಗೆ ಸ್ಪರ್ಧಿಸಿ ಎಂಬ ಒತ್ತಡ ತರುವ ಮೂಲಕ ವಿವಿಧ ಭಾಗದಿಂದ ಆಗಮಿಸಿದ ವಿವಿಧ ಧುರೀಣರಿಂದ ರವೀಂದ್ರ ನಾಯ್ಕರಿಗೆ ಈ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು.

ಇಲ್ಲಿಯವರೆಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಮುಖ ನೋಡಾಯಿತು. ಆರಿಸಿಯೂ ತಂದಾಯಿತು. ಆದರೆ ಯಾವ ಶಾಸನಕನಿಂದಲೂ ಅತಿಕ್ರಮಣದಾರರ ಸಮಸ್ಯೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಖಾರವಾಗಿ ಉಪಸ್ಥಿತರಿದ್ದ ಧುರೀಣರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿರುವ 22-23 ಸಾವಿರ ಅತಿಕ್ರಮಣದಾರರ ಕುಟುಂಬದ ಸದಸ್ಯರು ನಿರಂತರ 28-30 ವರ್ಷದಿಂದ ನಿಸ್ವಾರ್ಥವಾಗಿ ಹೋರಾಟಕ್ಕೆ ಮಹಾ ದೇಣಿಗೆ ಸಂಗ್ರಹಿಸದೇ ಅತಿಕ್ರಮಣದಾರರ ಪರವಾಗಿ ಹೋರಾಟ ಮಾಡಿರುವಿರಿ ಎಂದು ಹೇಳುತ್ತಾ ಹೋರಾಟ ಮಾಡಿರುವದರಿಂದ ಅತಿಕ್ರಮಣದಾರರ ನಿಮ್ಮ ಋಣದಲ್ಲಿದ್ದಾರೆ, ಯಾವ ಕಾರಣಕ್ಕೂ ಚುನಾವಣೆಯಿಂದ ಹಿಂದೇಟು ಹಾಕದಿರಿ ಎಂಬ ಮಾತುಗಳಿಗೆ ಹೋರಾಟಗಾರ ರವೀಂದ್ರ ನಾಯ್ಕ ಯಾವ ಉತ್ತರಕ್ಕೂ ಪ್ರತಿಕ್ರಿಯಿಸದೇ ಮೌನವಾಗಿದ್ದು ತಹಶೀಲ್ದಾದಾರರ ಕಛೇರಿಯಲ್ಲಿ ಅತಿಕ್ರಮಣದಾರರನ್ನುದ್ದೇಶಿಸಿ ಬಹಿರಂಗವಾಗಿ ಮಾತನಾಡುತ್ತಾ ಅತಿಕ್ರಮಣದಾರರಿಗೆ ಈ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಯಿಸುವ ಶಕ್ತಿ ಇದೆ. ಸಂದರ್ಭ ಬಂದರೆ ಶಕ್ತಿ ಪ್ರದರ್ಶನಕ್ಕೆ ಸನ್ನದ್ಧರಾಗಿರಿ ಎಂದು ಕರೆ ನೀಡಿರುವುದು ಮುಂದಿನ ರವೀಂದ್ರ ನಾಯ್ಕ ರಾಜಕೀಯ ನಡೆಯು ಅತಿಕ್ರಮಣದಾರರ ಮನಸ್ಸಿನಲ್ಲಿ ಇನ್ನೂ ನಿಗೂಢವಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.