ಸಿಂಗನಳ್ಳಿಯಲ್ಲಿ ಉಚಿತ ಆಯುಷ್ ತಪಾಸಣಾ- ಚಿಕಿತ್ಸಾ ಶಿಬಿರ ಸಂಪನ್ನ

ಮುಂಡಗೋಡ: ತಾಲೂಕಾ ಸರಕಾರಿ ಆಯುರ್ವೇದ ಆಸ್ಪತ್ರೆ, ನಿಸರ್ಗ ಟ್ರಸ್ಟ್ ಶಿರಸಿ, ಲೊಯೋಲ ವಿಕಾಸ ಕೇಂದ್ರ ಮುಂಡಗೋಡ ಹಾಗೂ ಗ್ರಾಮ ಪಂಚಾಯತ ಕಾತೂರ, ಸಿಂಗನಳ್ಳಿ ಇವರ ಸಹಯೋಗದೊಂದಿಗೆ ತಾಲೂಕಿನ ಸಿಂಗನಳ್ಳಿಯ ಸಭಾಭವನದಲ್ಲಿ ಉಚಿತ ಆಯುಷ್ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಯಿತು.

ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ|| ಸಂಜೀವ ಗಲಗಲಿ ಮಾತನಾಡಿ ಆಯುರ್ವೇದ ಪದ್ದತಿ ಬಗ್ಗೆ ಮನವರಿಕೆ ಮಾಡುತ್ತಾ ಆಯುರ್ವೇದ ಔಷಧಿಯು ತಕ್ಷಣದ ಫಲಿತಾಂಶವಲ್ಲ. ಇದು ದೀರ್ಘಾವಧಿಯ ಫಲಿತಾಂಶವಾಗಿದೆ. ಆದ ಕಾರಣ ಖಾಯಿಲೆಗೆ ತಕ್ಕಂತೆ ಆಯುರ್ವೇದ ಔಷಧಿಯನ್ನು ಮಾಡಿದಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಹೇಳಿದರು.

ಈ ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ ಲೊಯೋಲ ವಿಕಾಸ ಕೇಂದ್ರದ ಸಹ ನಿರ್ದೇಶಕ ಪ್ರಶಾಂತ ಮಾತನಾಡಿ ಆರೋಗ್ಯವೇ ಭಾಗ್ಯ ನಾವು ಯಾವುದೇ ರೀತಿಯ ಐಶ್ವರ್ಯವನ್ನು ಗಳಿಸುವುದಕ್ಕಿಂತ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಎಲ್ಲ ರೀತಿಯ ಐಶ್ವರ್ಯವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ಈ ಉಚಿತ ಆಯುಷ್ ತಪಾಸಣಾ ಶಿಬಿರದಲ್ಲಿ ಸಿಂಗನಳ್ಳಿ, ಹುಲಿಹೊಂಡಾ, ಮರಗಡಿ, ಜೋಡಿಕಟ್ಟಾ, ಆಲಳ್ಳಿ, ಮರಗಡಿ ದಡ್ಡಿಗಳಿಂದ 240 ಜನರು ತಪಾಸಣೆ  ಮಾಡಿಸಿಕೊಂಡು ಔಷಧಿಯನ್ನು ಪಡೆದು ಕೊಂಡರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.