ಯುವ ಬ್ರಿಗೇಡ್ ಸಂಗ್ರಹದ ಬಟ್ಟೆ: ಸಂತೆಯಲ್ಲಿ ಬಳಸಿದ ಬಟ್ಟೆಗಳ ಉಚಿತ ಮಾರಾಟ..!


ಕುಮಟಾ: ಈ ಭಾರಿಯ ಭೀಕರ ಮಳೆಯಿಂದ ನೆರೆ ಸಂತ್ರಸ್ತರಾದ ಕುಟುಂಬಗಳಿಗೆ ಸಹಾಯ ಹಸ್ತ ನೀಡುವ ಉದ್ದೇಶದಿಂದ ಯುವ ಬ್ರಿಗೇಡ್ ಈ ಹಿಂದೆ ಇತರೇ ಜಿಲ್ಲೆಗಳಿಂದ ಸಂಗ್ರಹಿಸಿದ ಬಟ್ಟೆಗಳಲ್ಲಿ ಕೆಲವು ಉಪಯೋಗಿಸದ ಬಟ್ಟೆಗಳಾಗಿದ್ದವು. ಅಂತಹ ಬಟ್ಟೆಗಳನ್ನು ನೆರೆ ಸಂತ್ರಸ್ತರಿಗೆ ವಿತರಿಸುವುದು ಸರಿಯಲ್ಲ ಎಂದು ಬುಧವಾರದ ಸಂತೆ ಮಾರುಕಟ್ಟೆಯಲ್ಲಿ ಅಗತ್ಯವಿರುವವರು ಪಡೆಯಬಹುದು ಎಂಬ ಉದ್ದೇಶದಿಂದ ಇಡಲಾಗಿತ್ತು.

ಈ ವರ್ಷ ಸುರಿದ ಭೀಕರ ಮಳೆಯ ಪರಿಣಾಮ ಜಿಲ್ಲೆಯಲ್ಲಿ ಹಲವು ಕುಟುಂಬಗಳು ಸಂಕಷ್ಟವನ್ನು ಅನುಭವಿಸಿ, ಮನೆ, ಆಸ್ತಿ, ಪಾಸ್ತಿಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದರು. ಅಂತಹ ಸಂದರ್ಭದಲ್ಲಿ ಇವರ ಸಹಾಯಕ್ಕಾಗಿ ನಿಂತ ಯುವಬ್ರಿಗೇಡ್ ಇತರೇ ಜಿಲ್ಲೆಗಳಿಂದ ಅಗತ್ಯ ಸಾಮಗ್ರಿಗಳ ಜೊತೆ ಹಲವು ಬಟ್ಟೆಗಳನ್ನು ಸಂಗ್ರಹಿಸಿತ್ತು. ಅಂತಹ ಬಟ್ಟೆಗಳಲ್ಲಿ ಕೆಲವು ಉಪಯೋಗಿಸಿದ ಬಟ್ಟೆಯಾಗಿರುವುದರಿಂದ ಇದನ್ನು ಸಂತ್ರಸ್ತರಿಗೆ ನೀಡುವುದು ಸರಿಯಲ್ಲ ಎಂಬ ಉದ್ದೇಶದಿಂದ ಯುವಾ ಬ್ರಿಗೇಡ್ ಕುಮಟಾ ಮಾರುಕಟ್ಟೆಯ ಪ್ರಾಂಗಣದಲ್ಲಿಟ್ಟಿತ್ತು. ಅಗತ್ಯವಿದ್ದವರು ಉಚಿತವಾಗಿ ಆ ಬಟ್ಟೆಗಳನ್ನು ಪಡೆದುಕೊಂಡರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.