ಮೈಸೂರು ದಸರಾ: ಉತ್ತರ ಕನ್ನಡ ಜಿಲ್ಲೆಯ ಸ್ಥಬ್ಧ ಚಿತ್ರಕ್ಕೆ ದ್ವಿತೀಯ ಸ್ಥಾನ

ಕಾರವಾರ: ಪ್ರತಿಷ್ಠಿತ ಮೈಸೂರು ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಸ್ಥಬ್ದಚಿತ್ರಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಸ್ಥಬ್ದ ಚಿತ್ರಗಳು ಮೈಸೂರು ಮೆರವಣಿಗೆಯಲ್ಲಿ ಪ್ರದರ್ಶನಗೊಂಡಿತ್ತು. ವಿಜಯ ದಶಮಿ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಬಿಂಬಿಸುವ ಚಿತ್ರ ಕೇಂದ್ರ ಬಿಂದುವಾಗಿತ್ತು.

ಕದಂಬರ ರಾಜದಾನಿ ಬನವಾಸಿ ಪರಂಪರೆಯನ್ನು ಮುಖ್ಯ ಕೇಂದ್ರವನ್ನಾಗಿಸಿ ಸ್ಥಬ್ದ ಚಿತ್ರವನ್ನು ಕಲಾವಿದ ಶಿವಕುಮಾರ ಎಂಬಾತರು ನಿರ್ಮಿಸಿದ್ದರು. ಆದಿಕವಿ ಪಂಪ ಅವರ ಮೂರ್ತಿಯ ಜೊತೆ ಶ್ರೀಕ್ಷೇತ್ರ ಮುರುಡೇಶ್ವರ, ಶಿವನ ವಿಗ್ರಹಗಳು ಮೆರವಣಿಗೆಯಲ್ಲಿ ಸಂಚರಿಸಿ ಜನರ ಗಮನ ಸೆಳೆದಿದ್ದವು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.