ಭುವನೇಶ್ವರಿ ಹೆಗಡೆಗೆ ಸುವರ್ಣ ನಿಧಿ ಪ್ರಶಸ್ತಿ


ಶಿರಸಿ: ಕನ್ನಡದ ಪ್ರಸಿದ್ಧ ಹಾಸ್ಯ ಲೇಖಕಿ ಉತ್ತರ ಕನ್ನಡ ಮೂಲದ ಭುವನೇಶ್ವರಿ ಹೆಗಡೆ ಅವರಿಗೆ ಉಡುಪಿ ಬ್ರಹ್ಮಾವರದ ಅಜಪುರ ಕರ್ನಾಟಕ ಸಂಘವು ನೀಡುವ ಸುವರ್ಣ ನಿಧಿ ಪ್ರಶಸ್ತಿ ನೀಡಿ ಗೌರವಿಸಿತು.

ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜಿನ ವಿಶ್ರಾಂತ ಅರ್ಥಶಾಸ್ತ್ರದ ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆ ಅವರಿಗೆ ಅವರ ಸಮಗ್ರ ಸಾಹಿತ್ಯ, ಮಾತುಗಾರಿಕೆ ಹಿನ್ನಲೆಯಲ್ಲಿ ಈ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಈ ಪ್ರಶಸ್ತಿಯನ್ನು ಬೈಕಾಡಿ ಶ್ರೀನಿವಾಸ ರಾವ್, ಡಾ. ಪಾದೇಕಲ್ಲು ವಿಷ್ಣು ಭಟ್ಟ, ಚೇರ್ಕಾಡಿ ಮಂಜುನಾಥ, ಸವಿತಾ ವೈ, ನಾರಾಯಣ ಮಡಿ, ಕೆ.ಅಶೋಕ ಭಟ್ಟ, ಚಂದ್ರಶೇಖರ್ ಕೇದಿಲಾಯ ಇತರರು ಪ್ರದಾನ ಮಾಡಿ ಗೌರವಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.