ಆರ್‌ಡಿಸಿ ಕ್ಯಾಂಪ್‌ಗೆ ಮಂಜೂಷಾ ಆಯ್ಕೆ


ಶಿರಸಿ: ನಗರದ ಎಮ್.ಎಮ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವರ್ಷದ ವಿದ್ಯಾರ್ಥಿನಿ, ಎನ್.ಸಿ.ಸಿ ಕೆಡೆಟ್ ಮಂಜೂಷಾ ಮನೋಜ್ ಧಾರವಾಡದಲ್ಲಿ ನಡೆದ ಹತ್ತು ದಿನಗಳ ಎನ್.ಸಿ.ಸಿ ಕ್ಯಾಂಪ್‌ನಲ್ಲಿ ಭಾಗವಹಿಸಿ, ಬೆಳಗಾವಿಯಲ್ಲಿ ನಡೆಯುವ ಆರ್‌ಡಿಸಿ ಕ್ಯಾಂಪ್‌ಗೆ ಆಯ್ಕೆ ಆಗಿದ್ದಾಳೆ.

ಒಟ್ಟು 450 ಕೆಡೆಟ್‌ಗಳಲ್ಲಿ 140 ಕೆಡೆಟ್ ಗಳನ್ನು ಆಯ್ಕೆ ಮಾಡಲಾಗಿದ್ದು, ಶಿರಸಿಯಿಂದ ಆಯ್ಕೆ ಆದ ಎಕೈಕ ಕೆಡೆಟ್ ಇವಳಾಗಿದ್ದು, ಇವಳ ಈ ಸಾಧನೆಗೆ ಎಮ್.ಇ.ಎಸ್ ನ ಅಧ್ಯಕ್ಷರು, ಪದಾಧಿಕಾರಿಗಳು, ಕಾಲೇಜು ಉಪಸಮಿತಿ ಅಧ್ಯಕ್ಷರು ಸದಸ್ಯರು, ಪ್ರಾಚಾರ್ಯರು ಹಾಗೂ ಪ್ರಾಧ್ಯಾಪಕರು ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Categories: ಚಿತ್ರ ಸುದ್ದಿ

Leave A Reply

Your email address will not be published.