ಸಭಾಧ್ಯಕ್ಷ ಕಾಗೇರಿ ಪ್ರಯತ್ನ: ರಸ್ತೆ ಸುಧಾರಣೆಗೆ 17 ಕೋಟಿ ರೂ ಬಿಡುಗಡೆ..


ಶಿರಸಿ: ಶಿರಸಿ- ಸಿದ್ದಾಪುರ ವಿಧಾನಸಭಾ ಕ್ಷೇತ್ರದ ವಿವಿಧೆಡೆ ರಸ್ತೆ ತೀರಾ ಹದಗೆಟ್ಟಿದ್ದು, ಇವುಗಳ ಸುಧಾರಣೆಗೆ ಲೆಕ್ಕ ಶೀರ್ಷಿಕೆ 5054 ಯೋಜನೆಯಡಿಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇವರ ಶಿಫಾರಸ್ಸಿನ ಮೇರೆಗೆ ಲೋಕೋಪಯೋಗಿ ಇಲಾಖೆಯಡಿ 17 ಕೋಟಿ ರೂ. ಕಾಮಗಾರಿಗೆ ಸರ್ಕಾರದಿಂದ ಮಂಜೂರಾತಿ ದೊರೆತಿದೆ.

ಕಾಮಗಾರಿಗಳು ಇಂತಿದೆ: ತಾಲೂಕಿನ ದೋಣಗಾರ ಕರೂರು ರಸ್ತೆ ಕಿ.ಮೀ 10.00 ರಿಂದ 13.00 ವರೆಗೆ ಆಯ್ದ ಭಾಗಗಳಲ್ಲಿ ಸುಧಾರಣೆಗೆ 60 ಲಕ್ಷ, ಸಿದ್ದಾಪುರ ತಾಲೂಕಿನ ಬಿಳಗಿ ಹೆಮ್ಮನಬೈಲ್ ಸೋವಿನಕೊಪ್ಪ ಕ್ರಾಸ್ ರಸ್ತೆ ಕಿ.ಮೀ 0.00 ರಿಂದ ಕಿ.ಮೀ 5.70 ರವರೆಗಿನ ಅಭಿವೃದ್ಧಿಗೆ 70 ಲಕ್ಷ, ತಾಲೂಕಿನ ತಾರಗೋಡ ಬೆಳಲೆ ರಸ್ತೆ ಸುಧಾರಣೆ 45 ಲಕ್ಷ, ನಿಡಗೋಡು ಹೆಗ್ಗೋಡ್ಮನೆ ಹುಳಸೆಕೈ ಬೆಳಸಲಿಗೆ ಕ್ರಾಸ್ ರಸ್ತೆ ಕಿ.ಮಿ. 5.60 ರಿಂದ 7.60 ರವರೆಗಿನ ರಸ್ತೆ ಅಭಿವೃದ್ಧಿಗೆ 70ಲಕ್ಷ, ತಾಲೂಕಿನ ಶಿರಸಿ ಹುಸರಿ ಅಂಡಗಿ ರಸ್ತೆ ಸುಧಾರಣೆಗೆ 50ಲಕ್ಷ, ತಾಲೂಕಿನ ಶಿರಸಿ ಹೊಸಕೊಪ್ಪಾ ರಸ್ತೆ ಕಿ.ಮೀ 7.00 ದಿಂದ 9.00 ವರೆಗಿನ ಅಭಿವೃದ್ಧಿಗೆ 40 ಲಕ್ಷ, ತಾಲೂಕಿನ ಬೆಣಗಾಂವ ರಸ್ತೆ ಕಿ.ಮೀ 3.00 ದಿಂದ 4.00 ವರೆಗಿನ ರಸ್ತೆ ಸುಧಾರಣೆಗೆ 35 ಲಕ್ಷ, ಶಿರಸಿ ತಾಲೂಕಿನ ಸೋಂದಾ ಮುಖ್ಯರಸ್ತೆಯಿಂದ ಜೈನಮಠ ಕೂಡು ರಸ್ತೆ ಸುಧಾರಣೆಗೆ 25 ಲಕ್ಷ, ಸೋಂದಾ ಮುಖ್ಯರಸ್ತೆಯಿಂದ ಸ್ವರ್ಣವಲ್ಲಿ ಮಠ ರಸ್ತೆ ಸುಧಾರಣೆಗೆ 30 ಲಕ್ಷ, ತಾಲೂಕಿನ ಮಳಲಿ ಓಣಿ ವಿಘ್ನೇಶ್ವರ ರಸ್ತೆ ಕಿ.ಮೀ 5.00 ದಿಂದ 8.50 ವರೆಗಿನ ರಸ್ತೆ ಸುಧಾರಣೆಗೆ 35 ಲಕ್ಷ, ಹೆಗ್ಗರಣಿ ಅಮ್ಮೇನಳ್ಳಿ ಸಂಪಖಂಡ ಹತ್ತರಗಿ ರಸ್ತೆ ಕಿ.ಮೀ 5.00 ದಿಂದ 6.00 ವರೆಗಿನ ರಸ್ತೆ ಸುಧಾರಣೆಗೆ 35ಲಕ್ಷ ಮಂಜೂರಿ.

ಖಾನಾಪುರ ತಾಳಗುಪ್ಪಾ ರಸ್ತೆಯಿಂದ ಅಜ್ಜಿಬಳ ಕೂಡು ರಸ್ತೆ ಸುಧಾರಣೆಗೆ 40 ಲಕ್ಷ, ವಾನಳ್ಳಿ ಪಂ. ಕಕ್ಕಳ್ಳಿ ದೋರಣಗಿರಿ ರಸ್ತೆ ಸುಧಾರಣೆಗೆ 50 ಲಕ್ಷ, ಯಡಳ್ಳಿ ಪಂ. ಖಾನಾಪುರ ತಾಳಗುಪ್ಪಾ ರಸ್ತೆಯಿಂದ ಕಲಕೈ ರಸ್ತೆ ಸುಧಾರಣೆಗೆ 30 ಲಕ್ಷ, ತಾಲೂಕಿನ ಕುಳವೆ ಪಂ. ಶಿರಸಿ ಹೊಸನಗರ ರಸ್ತೆಯಿಂದ ಗಡಿಹಳ್ಳಿ ಕೊಪ್ಪ ರಸ್ತೆ ಸುಧಾರಣೆಗೆ 40 ಲಕ್ಷ, ಇಟಗುಳಿ ಪಂ. ನೀರ್ನಳ್ಳಿ ಅಂದಳ್ಳಿ ಕರ್ಜಗಿಮನೆ ರಸ್ತೆ ಸುಧಾರಣೆಗೆ 55 ಲಕ್ಷ, ಮತ್ತಿಘಟ್ಟಾ ಕೆಳಗಿನ ಕೇರಿ ರಸ್ತೆ ಕಿ.ಮೀ 0.00 ದಿಂದ 0.75 ಹಾಗೂ 6.00 ದಿಂದ 7.50 ವರೆಗೆ ಆಯ್ದಭಾಗಗಳಲ್ಲಿ ರಸ್ತೆ ಸುಧಾರಣೆಗೆ 35 ಲಕ್ಷ, ನೆಗ್ಗು ಪಂ. ದೋಣಗಾರ ಕರೂರು ರಸ್ತೆಯಿಂದ ಹಲಸಗಿ ಕಿ.ಮೀ 0.00 ದಿಂದ 3.00 ವರೆಗೆ ರಸ್ತೆ ಸುಧಾರಣೆಗೆ 35 ಲಕ್ಷ, ಮಂಜೂರಿ.

ದೊಡ್ನಳ್ಳಿ ಪಂ. ಕುಮಟಾ ತಡಸ್ ರಸ್ತೆಯಿಂದ ನರೆಬೈಲ್ ರಸ್ತೆ ಸುಧಾರಣೆಗೆ 45 ಲಕ್ಷ, ಶಿವಳ್ಳಿ ಪಂ. ಪಂಚಲಿಂಗ ಬಾಳೆಗದ್ದೆ ರಸ್ತೆ ಸುಧಾರಣೆಗೆ 45 ಲಕ್ಷ, ಕುಮಟಾ ತಡಸ್ ರಾ.ಹೆ ದಿಂದ ಹಾರೂಗಾರ ಬೊಮ್ಮನಳ್ಳಿ ಮಳಲಿ ಓಣಿ ವಿಘ್ನೇಶ್ವರ ರಸ್ತೆ ಸುಧಾರಣೆಗೆ 30 ಲಕ್ಷ, ಜಾನ್ಮನೆ ಪಂ. ಕುಮಟಾ ತಡಸ್ ರಸ್ತೆಯಿಂದ ಸಂಪಖಂಡ ಸೋಮನಮನೆ ರಸ್ತೆ ಸುಧಾರಣೆಗೆ 25 ಲಕ್ಷ, ಚಿಪಗಿ ಊರೊಳಗಿನ ರಸ್ತೆ ಸುಧಾರಣೆಗೆ 25 ಲಕ್ಷ, ಜಡ್ಡಿಗದ್ದೆ ಗಣೇಶಪಾಲ ರಸ್ತೆ ಸುಧಾರಣೆಗೆ 35 ಲಕ್ಷ,
ರಾಜ್ಯ ಹೆದ್ದಾರಿಯ ಕಾಮಗಾರಿಗಳು:  ಶಿರಸಿ ತಾಲೂಕಿನ ಸೊಣಗಿಮನೆ ಉಂಚಳ್ಳಿ ಫಾಲ್ಸ್ ರಸ್ತೆ ಕಿ.ಮೀ 30.00 ದಿಂದ 32.00ರ ವರೆಗೆ ರಸ್ತೆ ಅಗಲೀಕರಣ ಗೊಳಿಸಿ ಡಾಂಬರೀಕರಣ ಮಾಡಲು 55 ಲಕ್ಷ ಬಿಡುಗಡೆ.

ಸಿದ್ದಾಪುರ ತಾಲೂಕಿನ: ಸೊಂಗೆಮನೆ ಉಂಚಳ್ಳಿ ಫಾಲ್ಸ್ ರಾ.ಹೆ-145 ರಸ್ತೆ ಕಿ.ಮೀ 55.30 ರಿಂದ 56.90 ಹಾಗೂ 57.80 ರಿಂದ 60.00 ರವರೆಗೆ ಅಭಿವೃದ್ಧಿಗೆ 100 ಲಕ್ಷ, ಕುಮಟಾ ಕೊಡಮಡಗಿ ರಾ.ಹೆ-48 ರಸ್ತೆ ಕಿ.ಮೀ 47.50 ರಿಂದ 51.50 ರವರೆಗೆ ಹಾಗೂ 81.40 ರಿಂದ 84.00 ವರೆಗೆ ಅಭಿವೃದ್ಧಿಗೆ 300 ಲಕ್ಷ, ಹೊನ್ನಾವರ-ಮೆಣಸಿ ರಾಜ್ಯ ಹೆದ್ದಾರಿ – 144 ರ ಸರಪಳಿ 54.90 ಕಿ.ಮೀ. ರಿಂದ 55.10 ಕಿ.ಮೀ. ರವರೆಗೆ ಹಾಗೂ 55.60 ಕಿ.ಮೀ ರಿಂದ 57.50 ರವರೆಗಿನ ರಸ್ತೆ ಅಭಿವೃದ್ಧಿಗೆ 100 ಲಕ್ಷ, ಖಾನಾಪುರ ತಾಳಗುಪ್ಪ ರಾಜ್ಯ ಹೆದ್ದಾರಿ – 93 ರ ಸರಪಳಿ 179.50 ರಿಂದ 179.60, 185.00 ರಿಂದ 185.10, 185.60 ರಿಂದ 185.70 186.20 ರಿಂದ 186.40, 186.70 ರಿಂದ 187.20, 188.60 ರಿಂದ 188.75 ರವರೆಗೆ ಅಭಿವೃದ್ಧಿಗೆ 100 ಲಕ್ಷ, ಸೊಂಗೆಮನೆ ಉಂಚಳ್ಳಿ ಫಾಲ್ಸ್ ರಾ.ಹೆ-145 ರಸ್ತೆ ಕಿ.ಮೀ 43.00 ರಿಂದ 45.60 ಹಾಗೂ ಕಿ.ಮೀ 62.00 ರಿಂದ 67.00 ರವರೆಗೆ ಮರು ಡಾಂಬರಿಕರಣ ಮಾಡಲು 60 ಲಕ್ಷ ಬಿಡುಗಡೆಗೊಂಡಿದೆ. ಈ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಲು ಇಲಾಖಾ ಮುಖ್ಯಸ್ಥರಿಗೆ ಸಭಾಧ್ಯಕ್ಷರು ಸೂಚಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.