ನೀರಿನ ಸುಳಿಗೆ ಸಿಲುಕಿದ ಪ್ರವಾಸಿಗರ ಜೀವ ಕಾಪಾಡಿದ ಲೈಫ್ ಗಾರ್ಡ್ ಸಿಬ್ಬಂದಿ


ಗೋಕರ್ಣ: ಸಮುದ್ರದಲ್ಲಿ ಈಜಾಡಲು ತೆರಳಿದಾಗ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಇಬ್ಬರು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಬುಧವಾರ ಇಲ್ಲಿನ ಕುಟ್ಲೆ ಕಡಲತೀರದಲ್ಲಿ ನಡೆದಿದೆ.

ಬೆಂಗಳೂರು ಮೂಲದ ನಾಲ್ವರ ಸ್ನೇಹಿತರ ತಂಡ ಪ್ರವಾಸಕ್ಕೆ ಇಲ್ಲಿಗೆ ಬಂದಿದ್ದು, ಸಮುದ್ರದಲ್ಲಿ ಈಜಡಲು ತೆರಳಿದ್ದು, ಅದರಲ್ಲಿ ಇಬ್ಬರು ಸುಳಿಕೆ ಸಿಲುಕಿದ್ದಾರೆ. ಕರ್ತವ್ಯದಲ್ಲಿದ್ದ ಜೀವರಕ್ಷಕ ಸಿಬ್ಬಂದಿಗಳಾದ ಸಂಜೀವ ಹೊಸ್ಕಟ್ಟಾ, ರಘುವೀರ ಅಂಬಿಗ ಗಮನಿಸಿದ್ದು, ತಕ್ಷಣ ಧಾವಿಸಿ ಇಬ್ಬರನ್ನು ರಕ್ಷಿಸಿದ್ದಾರೆ. ಪೊಲೀಸ್ ಸಿಬ್ಬಂದಿ ರಾಜು ಮಾಳಿ ಮತ್ತು ಪ್ರವಾಸಿ ಮಿತ್ರ ಸಿಬ್ಬಂದಿ ರಮಾಕಾಂತ ಹರಿಕಂತ್ರ ಸಹಾಯ ಮಾಡಿದ್ದಾರೆ. ಪುಗಲ್ ನಕಿರಾಮಣ್ (21), ಗೋಪಿನಾಥ ಗೌಡ (21) ಜೀವಾಪಾಯದಿಂದ ಪಾರಾಗಿ ಬಂದ ಪ್ರವಾಸಿಗರಾಗಿದ್ದಾರೆ.

ದಸರಾ ರಜೆಗೆ ನಿಮಿತ್ತ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ಸಮುದ್ರ ಆಕರ್ಷಣೆ ಮುಗಿಬಿದ್ದು, ಅಪಾಯದಲ್ಲಿ ಸಿಲುಕುತ್ತಿರುವುದು ಕಳೆದ 5 ದಿನಗಳಲ್ಲಿ ಮೂರನೆ ಘಟನೆ ಇದಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.