ಕಲಿವೀರಭದ್ರ ದೇವಾಲಯದಲ್ಲಿ ಕುಂಕುಮಾರ್ಚನೆ ಕಾರ್ಯಕ್ರಮ

ಕುಮಟಾ: ತಾಲೂಕಿನ ಹೆಗಡೆಯ ಹಳಗೇರಿಯ ನಾಗದೇವತಾ ಕಲಿವೀರಭದ್ರ ದೇವಾಲಯದಲ್ಲಿ ದುರ್ಗಾಷ್ಟಮಿ ಪ್ರಯುಕ್ತ ಕುಂಕುಮಾರ್ಚನೆ ಕಾರ್ಯಕ್ರಮ ವಿದ್ಯುಕ್ತವಾಗಿ ನೆರವೇರಿತು.

ದೇವಸ್ಥಾನದ ಮೊಕ್ತೇಸರ ಹಾಗೂ ತಣ್ಣೀರುಕುಳಿಯ ಹಾಲಕ್ಕಿ ಸಮಾಜದ ಯಜಮಾನ ತಿಮ್ಮಣ್ಣ ಗೌಡ ಮಾರ್ಗದರ್ಶನದಲ್ಲಿ ಹಳಗೇರಿಯ ಶಿಲ್ಪಾ ಕೆ ಎಂ ಮತ್ತು ಶಾಂತಿ ಮುಕ್ರಿ ಸಂಗಡಿಗರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕುರಿತು ಶಿಲ್ಪಾ ಕೆ.ಎಂ. ಮಾತನಾಡಿ, ಸನಾತನ ಧರ್ಮದಲ್ಲಿ ಅರಿಶಿಣ-ಕುಂಕುಮಕ್ಕೆ ಬಹಳ ಮಹತ್ವವಿದೆ. ಈ ಭಾಗದ ಎಲ್ಲ ಮಾತೆಯರು ಬಹಳ ಉತ್ಸಾಹದಿಂದ ಕುಂಕುಮಾರ್ಚನೆ ಕಾರ್ಯಕ್ರಮ ಭಾಗಿಯಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ದೇವಾಲಯದ ಅರ್ಚಕ ಕುಪ್ಪ ಮುಕ್ರಿ ಪೂಜೆ ನೆರವೇರಿಸಿದರು. ಅರ್ಚಕ ರಾಮ ಮುಕ್ರಿ ಸಹೋದರರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.