ಮಧುಕೇಶ್ವರ ಶಾಸ್ತ್ರೀಗೆ ಡಾಕ್ಟರೇಟ್‌ ಪದವಿ ಪ್ರದಾನ

ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲಿ ಬಳಿಯ ಹುಲದೇವನಸರದ ಮಧುಕೇಶ್ವರ ಪದ್ಮನಾಭ ಶಾಸ್ತ್ರೀ ಇವರಿಗೆ ಹೊಸದಿಲ್ಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನಂ ಮಾನಿತ ವಿಶ್ವವಿದ್ಯಾನಿಲಯವು ಈತ್ತೀಚೆಗೆ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ.

ಮಧುಕೇಶ್ವರ ಶಾಸ್ತ್ರೀ ಅವರು ಮಂಡಿಸಿದ ಶ್ರೀ ಶಂಕರ ಭಗವತ್ಪಾದ ಕೃತ ಸ್ತೋತ್ರೇಷು ಕಾವ್ಯತತ್ವ ಸಮೀಕ್ಷಣಂ ಎಂಬ ಮಹಾಪ್ರಬಂಧಕ್ಕೆ ಪಿಎಚ್‌ಡಿ ದೊರೆತಿದೆ. ಶೃಂಗೇರಿ ರಾಜೀವಗಾಂಧಿ ಪರಿಸರ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಬಿ.ಎಡ್‌ ವಿಭಾಗ ಮುಖ್ಯಸ್ಥ ಡಾ.ಚಂದ್ರಕಾಂತ ಭಟ್ಟ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಸಿದ್ಧಪಡಿಸಿ ಮಂಡನೆ ಮಾಡಿದ್ದಾರೆ. ಇವರು ಮಂಗಳೂರಿನ ಕೆನರಾ ಪ.ಪೂ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ಕಳೆದೆರಡು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

Categories: ಚಿತ್ರ ಸುದ್ದಿ

Leave A Reply

Your email address will not be published.